Asianet Suvarna News Asianet Suvarna News

Breaking: ಸಾನಿಯಾಗೆ ಕೈಕೊಟ್ಟ ಶೋಯೆಬ್‌ ಮಲೀಕ್‌, ನಟಿ ಸನಾ ಜಾವೇದ್‌ ಕೈಹಿಡಿದ ಪಾಕ್‌ ಕ್ರಿಕೆಟಿಗ!

ನಟಿಯ ಜೊತೆಗಿನ ವಿವಾಹದ ಫೋಟೋವನ್ನು ಹಂಚಿಕೊಂಡಿರುವ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಶೋಯೆಬ್‌ ಮಲೀಕ್‌, ನಾವು ನಮ್ಮನ್ನು ಜೋಡಿಯಾಗಿ ರಚನೆಯಾಗಿದ್ದೇವೆ ಎಂದು ಬರೆದಿದ್ದಾರೆ.

Pakistan Cricketer Shoaib Malik marries actress Sana Javed rumours of separation with Sania Mirza san
Author
First Published Jan 20, 2024, 12:20 PM IST

ನವದೆಹಲಿ (ಜ.20): ಕೊನೆಗೂ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್‌ ಮಲೀಕ್‌, ಭಾರತದ ಪ್ರಖ್ಯಾತ ಟೆನಿಸ್‌ ತಾರೆ ಸಾನಿಯಾ ಮಿರ್ಜಾಗೆ ಕೈಕೊಟ್ಟಿದ್ದಾರೆ. ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ, ಪಾಕಿಸ್ತಾನಿ ನಟಿ ಸನಾ ಜಾವೇದ್‌ ಅವರನ್ನು ವಿವಾಹವಾಗಿದ್ದಾರೆ. ಈ ಕುರಿತಾದ ಫೋಟೋಗಳನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ನಾವು ನಮ್ಮನ್ನು ಜೋಡಿಯಾಗಿ ರಚಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಸಾನಿಯಾ ಮಿರ್ಜಾ ಅವರೊಂದಿಗೆ ವಿಚ್ಛೇದನ ಸುದ್ದಿ ವೈರಲ್‌ ಆಗುತ್ತಿರುವ ನಡುವೆಯೇ, ಅನುಭವಿ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್‌ ಮಲೀಕ್‌ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಶನಿವಾರ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಈ ಚಿತ್ರಗಳನ್ನು ಪೋಸ್ಟ್‌ ಮಾಡಿದ್ದಾರೆ.ಇದಕ್ಕೂ ಮುನ್ನ ಬುಧವಾರ ತಮ್ಮ ಸೋಶಿಯಲ್‌ ಮೀಡಿಯಾ ಪೇಜ್‌ನಲ್ಲಿ ಕುತೂಹಲದ ಪೋಸ್ಟ್‌ ಹಂಚಿಕೊಂಡಿದ್ದ ಸಾನಿಯಾ ಮಿರ್ಜಾ, ಪಾಕಿಸ್ತಾನದ ಕ್ರಿಕೆಟಿಗನ ಜೊತೆ ಡಿವೋರ್ಸ್‌ ಆಗುತ್ತಿರುವುದು ನಿಜ ಎನ್ನುವ ಅರ್ಥದಲ್ಲಿ ತಿಳಿಸಿದ್ದರು.

ತಮ್ಮ ಪೋಸ್ಟ್‌ಬಲ್ಲಿ ಬರೆದುಕೊಂಡಿದ್ದ ಸಾನಿಯಾ ಮಿರ್ಜಾ, ಮದುವೆ ಎನ್ನುವುದು ಕಠಿಣ, ಡಿವೋರ್ಸ್‌ ಎನ್ನುವುದು ಕಠಿಣ. ನಿಮ್ಮ ಕಷ್ಟವನ್ನು ಆಯ್ದುಕೊಳ್ಳಿ, ಬೊಜ್ಜು ಕಷ್ಟ, ಫಿಟ್‌ ಆಗಿರುವುದು ಕಷ್ಟ, ನಿಮ್ಮ ಕಷ್ಟವನ್ನು ಆರಿಸಿಕೊಳ್ಳಿ, ಯಾರಿಗೋ ಭಾರವಾಗಿರುವುದು ಕಷ್ಟ, ಆರ್ಥಿಕವಾಗಿ ಶಿಸ್ತಿನಲ್ಲಿರುವುದು ಕಷ್ಟ, ನಿಮ್ಮ ಕಷ್ಟವನ್ನು ಆರಿಸಿಕೊಳ್ಳಿ. ಸಂವಹನ ಮಾಡುವುದು ಕಷ್ಟ. ಸಂವಹನ ಮಾಡದೇ ಇರುವುದು ಕಷ್ಟ. ನಿಮ್ಮ ಕಷ್ಟವನ್ನು ಆರಿಸಿಕೊಳ್ಳಿ. ಜೀವನ ಅನ್ನೋದು ಸುಲಭವಾಗಿರಲು ಸಾಧ್ಯವುಲ್ಲ. ಇದು ಕಷ್ಟವೇ ಆಗಿರುತ್ತದೆ. ಆದರೆ, ನಮ್ಮ ಕಷ್ಟವನ್ನು ನಾವು ಆರಿಸಿಕೊಳ್ಳುತ್ತೇವೆ. ಆದರೆ, ಎಚ್ಚರದಿಂದ ಆರಿಸಿಕೊಳ್ಳಿ' ಎಂದು ಪೋಸ್ಟ್‌ ಮಾಡಿದ್ದರು.

ಶೋಯೆಬ್‌ ಮಲೀಕ್‌ ಹಾಗೂ ಸನಾ ಜಾವೇದ್‌ ಡೇಟಿಂಗ್‌ ನಡೆಸುತ್ತಿದ್ದಾರೆ ಎನ್ನುವ ಬಗ್ಗೆ ಸಾಕಷ್ಟು ರೂಮರ್‌ಗಳಿದ್ದವು. ಕಳೆದ ವರ್ಷ ಸನಾ ಜಾವೇದ್‌ ಅವರ ಜನ್ಮದಿನದಂದು ಶೋಯೆಬ್‌ ಮಲೀಕ್‌ ವಿಶ್‌ ಮಾಡಿದ್ದಲ್ಲದೆ, ಆಕೆಯ ಜೊತೆಗಿರುವ ಫೋಟೋವನ್ನು ಕೂಡ ಸೋಶಿಯಲ್‌ ಮೀಡಿಯಾದಲಲ್ಲಿ ಹಂಚಿಕೊಂಡಿದ್ದರು. ಕೇವಲ ಶೋಯೆಬ್‌ ಮಲೀಕ್‌ ಮಾತ್ರವಲ್ಲ ಸನಾ ಜಾವೇದ್‌ ಕೂಡ ತಮ್ಮ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ.

ಶೋಯೆಬ್‌ ಮಲಿಕ್‌ಗೂ ಮೊದಲು ಸಾನಿಯಾ ಮಿರ್ಜಾ ಜತೆ ಥಳಕು ಹಾಕಿಕೊಂಡಿದ್ದ ಅಚ್ಚರಿಯ ಹೆಸರುಗಳಿವು..!

ಭಾರತದ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ 2010 ರಲ್ಲಿ ವಿವಾಹವಾಗಿದ್ದರು. ಇಬ್ಬರೂ ಸಾಂಪ್ರದಾಯಿಕ ಮುಸ್ಲಿಂ ಶೈಲಿಯಲ್ಲಿ ವಿವಾಹವಾದರು. ದಾಂಪತ್ಯದಲ್ಲಿ ಸಾನಿಯಾ ಮಿರ್ಜಾ ಒಂದು ಮಗುವನ್ನು ಕೂಡ ಹೊಂದಿದ್ದು, 2018ರಲ್ಲಿ ಜನಿಸಿದ್ದ ಪುತ್ರನಿಗೆ ಇಜಾನ್‌ ಎಂದು ಹೆಸರಿಟ್ಟಿದ್ದಾರೆ. ಮಗ ಹುಟ್ಟಿದ ಬಳಿಕ ಸಾನಿಯಾ ಹಾಗೂ ಶೋಯೆಬ್‌ ಅವರ ದಾಂಪತ್ಯದಲ್ಲಿ ಎಲ್ಲವೂ ಸರಿಯಾಗಿರಲಿಲ್ಲ. ಅವರ ಡಿವೋರ್ಸ್‌ ಬಗ್ಗೆ ದಿನಕ್ಕೊಂದು ವರದಿಗಳು ಬರುತ್ತಿದ್ದವು. ಡಿವೋರ್ಸ್‌ ಸುದ್ದಿ ಬರುವ ಮುನ್ನವೇ ಶೋಯೆಬ್‌ ಮಲೀಕ್‌ ಮತ್ತೊಂದು ವಿವಾಹವಾಗಿರುವ ಸುದ್ದಿ ಹೊರಬಿದ್ದಿದೆ.

ಸಾನಿಯಾ ಮಿರ್ಜಾ-ಶೋಯೆಬ್ ಮಲಿಕ್ ದಾಂಪತ್ಯಕ್ಕೆ ಹುಳಿ ಹಿಂಡಿದ ಆಯೆಷಾ ಒಮರ್ ಯಾರು ಗೊತ್ತಾ..?

Follow Us:
Download App:
  • android
  • ios