ಇಸ್ಲಾಮಾಬಾದ್(ಜು.25): ಪಾಕಿಸ್ತಾನ ಕ್ರಿಕೆಟಿಗರು ಹಾಗೂ ವಿವಾದಕ್ಕೆ ಎಲ್ಲಿಲ್ಲದ ನಂಟು. ಇದೀಗ ಪಾಕ್ ತಂಡದ ಸ್ಟಾರ್ ಕ್ರಿಕೆಡಿಗ ಇಮಾಮ್ ಉಲ್ ಹಕ್ ಹೊಸ ವಿವಾದಲ್ಲಿ ಸಿಲುಕಿದ್ದಾರೆ. ಹಲವು ಹುಡುಗಿಯರ ಜೊತೆ ಅನೈತಿಕ ಸಂಬಂಧ ಹೊಂದಿರುವ ಇಮಾಮ್ ಸೀಕ್ರೆಟ್ ಇದೀಗ ಬಟಾ ಬಯಲಾಗಿದೆ. ಒಂದಲ್ಲ, ಎರಡಲ್ಲ ಬರೋಬ್ಬರಿ 7 ರಿಂದ 8 ಹುಡುಗಿಯರ ಜೊತೆ ಸಂಬಂಧ ಇಟ್ಟಕೊಂಡಿರುವುದು ಇಮಾಮ್ ಮಾನ ಹರಾಜು ಹಾಕಿದೆ.

ಇದನ್ನೂ ಓದಿ: ವಿಶ್ವದ ಶ್ರೇಷ್ಠ ತಂಡವನ್ನು ಕಟ್ತೀವಿ: ಪಾಕ್ ಪ್ರಧಾನಿ ಇಮ್ರಾನ್ ಖಾನ್

ಹಲವು ಹುಡುಗಿಯರ ಜೊತೆ ಕ್ರಿಕೆಟಿಗ ಇಮಾಮ್ ಉಲ್ ಹಕ್ ಚಾಟಿಂಗ್ ಮಾಡಿರೋ ಸಂದೇಶಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಜಗಜ್ಜಾಹೀರಾಗಿದೆ. ಇಮಾಮ್ ಹಲವು ಹುಡುಗಿಯರ ಜೊತೆ ಚಾಟಿಂಗ್ ಮಾಡುತ್ತಿದ್ದ ಮೆಸೇಜ್‌ಗಳನ್ನು ಟ್ವೀಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಇಷ್ಟೇ ಅಲ್ಲ ಇಮಾಮ್ ಪ್ರತಿ ಹುಡುಗಿಯ ಜೊತೆ ಚಾಟಿಂಗ್ ಮಾಡುವಾಗ ತಾನು ಸಿಂಗಲ್ ಎಂದು ಹೇಳಿ ಚಾಟ್ ಶುರು ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಪಾಕಿಸ್ತಾನ ಆಯ್ಕೆ ಸಮಿತಿಗೆ ಇನ್ಜಮಾಮ್ ಗುಡ್ ಬೈ!

ಟ್ವಿಟರ್ ಖಾತೆದಾರರು ಇಮಾಮ್ ಚಾಟಿಂಗ್ ಸ್ಕ್ರೀನ್ ಶಾಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ. ಕನಿಷ್ಠ 7 ರಿಂದ 8 ಹುಡುಗಿಯರ ಜೊತೆ ಸಂಬಂಧ ಹೊಂದಿದ್ದಾನೆ. ಹೆಚ್ಚಿನ ಹುಡುಗಿಯರಲ್ಲಿ ಲವ್, ಚಾಟಿಂಗ್, ಡೇಟಿಂಗ್ ಒಕೆ, ಮದುವೆ  ಯಾಕೆ ಅನ್ನೋ ರೀತಿ ಸಂದೇಶಗಳನ್ನು  ಕಳುಹಿಸಿದ್ದಾರೆ. ಇದೀಗ ಈ ಎಲ್ಲಾ ಸಂದೇಶಗಳು ಟ್ವಿಟರ್‌ನಲ್ಲಿ ಹರಿದಾಡುತ್ತಿದೆ. ಹಲವು ಯುವತಿಯರ ಜೊತೆ ಸಂಬಂಧ ಆರೋಪವನ್ನು ಇಮಾಮ್ ಉಲ್ ಹಕ್ ನಿರಾಕರಿಸಿದ್ದಾರೆ.