ಪಾಕಿಸ್ತಾನ ನಾಯಕನಿಂದ 1.4 ಕೋಟಿ ಆಮಿಷ - ಶೇನ್ ವಾರ್ನ್ ಗಂಭೀರ ಆರೋಪ!
ಸದಾ ಸುದ್ದಿಯಲ್ಲಿರುವ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ಪಾಕಿಸ್ತಾನ ಮಾಜಿ ನಾಯಕನ ವಿರುದ್ಧ ಗಂಭೀರ್ ಆರೋಪ ಮಾಡಿದ್ದಾರೆ. ಪಾಕಿಸ್ತಾನ ತಂಡವನ್ನ ಸೋಲಿನಿಂದ ತಪ್ಪಿಸಲು 1.4 ಕೋಟಿ ಆಫರ್ ನೀಡಿದ್ದರು ಎಂಬ ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದಾರೆ.
ಸಿಡ್ನಿ(ಅ.12): ಕ್ರಿಕೆಟ್‌ನಿಂದ ವಿದಾಯ ಹೇಳಿ ವರ್ಷಗಳೇ ಉರುಳಿದ್ದರೂ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ಸದಾ ಸುದ್ದಿಯಲ್ಲಿರುತ್ತಾರೆ. ನೂ ಸ್ಪಿನ್ ಅಟೋಬಯೋಗ್ರಫಿ ಮೂಲಕ ಇತ್ತೀಚೆಗೆ ಭಾರಿ ಸದ್ದು ಮಾಡಿದ ಶೇನ್ ವಾರ್ನ್ ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ.
ಪಾಕಿಸ್ತಾನ ಮಾಜಿ ನಾಯಕ ಸಲೀಮ್ ಮಲ್ಲಿಕ್, ಪಾಕಿಸ್ತಾನ ತಂಡವನ್ನ ಸೋಲಿನಿಂದ ತಪ್ಪಿಸಲು 1.47 ಕೋಟಿ ರೂಪಾಯಿ ಆಮಿಷ ನೀಡಿದ್ದರು ಎಂದು ಶೇನ್ ವಾರ್ನ್ ಸಂದರ್ಶದಲ್ಲಿ ಹೇಳಿದ್ದಾರೆ ಎಂದು ಕ್ರಿಕ್‌ಟ್ರಾಕರ್ ವರದಿ ಮಾಡಿದೆ.
1994ರ ಪಾಕಿಸ್ತಾನ ಪ್ರವಾಸ ಕೈಗೊಂಡ ಆಸ್ಟ್ರೇಲಿಯಾಗೆ ಉತ್ತಮ ಪ್ರದರ್ಶನ ನೀಡಿತ್ತು. ಪಾಕಿಸ್ತಾನಕ್ಕೆ ಸೋಲು ಖಚಿತವಾಗುತ್ತಿದ್ದಂತೆ, ನಾಯಕ ಸಲೀಮ್ ಮಲ್ಲಿಕ್, ಶೇನ್ ವಾರ್ನ್‌ಗೆ 1.4 ಕೋಟಿ ಆಫರ್ ನೀಡಿದ್ದರು. ಅರ್ಧ ತಾಸು ಯಾವುದೇ ವಿಕೆಟ್ ಕಬಳಿಸದೆ, ವೈಡ್ ಎಸೆಯುವಂತೆ ಸೂಚಿಸಿದ್ದರು. ಹೀಗಾದಲ್ಲಿ ಪಾಕಿಸ್ತಾನ ಪಂದ್ಯವನ್ನ ಡ್ರಾ ಮಾಡಿಕೊಳ್ಳಲಿದೆ. ಇದಕ್ಕೆ ಮಲ್ಲಿಕ್ ಕೋಟಿ ರೂಪಾಯಿ ಆಫರ್ ನೀಡಿದ್ದಾರೆ ಎಂದು ಶೇನ್ ವಾರ್ನ್ ಸಂದರ್ಶನದಲ್ಲಿ ಹೇಳಿದ್ದಾರೆ.