ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಆತ್ಮಚರಿತ್ರೆ ’ಗೇಮ್ ಚೇಂಜರ್’ ಪುಸ್ತಕದ ಬಗ್ಗೆ ಪಾಕಿಸ್ತಾನದ ಕ್ರಿಕೆಟಿಗನೇ ತಿರುಗಿಬಿದ್ದಿದ್ದಾನೆ. ಗಂಭೀರ್ ಬಳಿಕ ಪಾಕಿಸ್ತಾನದ ಕ್ರಿಕೆಟಿಗ ಅಫ್ರಿದಿ ಮೇಲೆ ಕಿಡಿಕಾರಿದ್ದಾನೆ. ಅಷ್ಟಕ್ಕೂ ಯಾರು ಆ ಕ್ರಿಕೆಟಿಗ ನೀವೇ ನೋಡಿ...
ಇಸ್ಲಾಮಾಬಾದ್(ಮೇ.08): ತಮ್ಮ ಆತ್ಮಚರಿತ್ರೆ ‘ಗೇಮ್ ಚೇಂಜರ್’ ಪ್ರಕಟಗೊಂಡ ಬಳಿಕ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ವಿರುದ್ಧ ಟೀಕೆಗಳು ಮುಂದುವರೆದಿದ್ದು, ಇದೀಗ ಸ್ವತಃ ಪಾಕಿಸ್ತಾನದ ಕ್ರಿಕೆಟಿಗ ಇಮ್ರಾನ್ ಫರ್ಹಾತ್, ಅಫ್ರಿದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹುಟ್ಟಿದ್ದು 1980 ಅಲ್ಲ- ಶಾಹಿದ್ ಅಫ್ರಿದಿ ನಿಜ ವಯಸ್ಸು ಬಹಿರಂಗ!
ಅಫ್ರಿದಿ ಓರ್ವ ಸ್ವಾರ್ಥಿಯಾಗಿದ್ದು, ತಮ್ಮ ಸ್ವಾರ್ಥಕ್ಕಾಗಿ ಅನೇಕ ಆಟಗಾರರ ವೃತ್ತಿ ಜೀವನವನ್ನು ಹಾಳು ಗೆಡವಿದ್ದಾರೆ ಎಂದು ಫರ್ಹಾತ್ ಆರೋಪಿಸಿದ್ದಾರೆ. ಅಫ್ರಿದಿ ವಿರುದ್ಧ ಸರಣಿ ಟ್ವೀಟ್ ಮೂಲಕ ಕಿಡಿಕಾರಿರುವ ಪರ್ಹಾತ್, ತಮ್ಮ ವಯಸ್ಸಿನ ಬಗ್ಗೆ ಸುಳ್ಳು ಹೇಳಿ ಮೋಸ ಮಾಡಿದ್ದ ಅಫ್ರಿದಿ ರಾಜಕಾರಣಿಯಾಗಲು ಯೋಗ್ಯರಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಶಾಹಿದ್ ಅಫ್ರಿದಿ ತಮ್ಮ ಆತ್ಮಕತೆ ’ಗೇಮ್ ಚೇಂಜರ್’ನಲ್ಲಿ ಟೀಂ ಇಂಡಿಯಾ ವಿಶ್ವಕಪ್ ಹೀರೋ ಗೌತಮ್ ಗಂಭೀರ್’ಗೆ ಹೇಳಿಕೊಳ್ಳುವಂತಹ ಯಾವುದೇ ಶ್ರೇಷ್ಠ ದಾಖಲೆಗಳನ್ನು ಬರೆಯದಿದ್ದರೂ, ಅಹಂಕಾರಕ್ಕೇನೂ ಕಡಿಮೆಯಿಲ್ಲ ಎಂದು ಹೇಳುವ ಮೂಲಕ ಗೌತಿ ಕಾಲೆಳೆದಿದ್ದರು. ಇದು ವಾಕ್ಸಮರಕ್ಕೆ ಕಾರಣವಾಗಿದೆ.
'ಗಂಭೀರ್‌ಗೆ ಚಿಕಿತ್ಸೆ ಅಗತ್ಯವಿದೆ, ನಾನೇ ವೀಸಾ ಕೊಡಿಸುವೆ'
ಇದೀಗ ಅಫ್ರಿದಿ ಪುಸ್ತಕ ಬಿಡುಗಡೆಗೆ ವಿಘ್ನವೊಂದು ಎದುರಾಗಿದ್ದು, ’ಗೇಮ್ ಚೇಂಜರ್’ ಪುಸ್ತಕದಲ್ಲಿ ಹಿರಿಯ ಕ್ರಿಕೆಟಿಗರ ಚಾರಿತ್ರ್ಯವಧೆಯಾಗುವಂತಹ ಅಂಶಗಳಿವೆ. ಹೀಗಾಗಿ ಪುಸ್ತಕದ ಮೇಲೆ ನಿಷೇಧ ಹೇರಬೇಕೆಂದು ಪಾಕಿಸ್ತಾನದ ಅಡ್ವೋಕೇಟ್ ಅಬ್ದುಲ್ ಜಲೀಲ್ ಖಾನ್ ಕೋರ್ಟ್ ಮೆಟ್ಟಿಲೇರಿದ್ದಾರೆ.
