ಏಷ್ಯಾಕಪ್ ಟೂರ್ನಿಗೆ ಟೀಂ ಇಂಡಿಯಾ ತಂಡ ಪ್ರಕಟಿಸಿದ ಬೆನ್ನಲ್ಲೇ, ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೂಡ ಟೀಂ ಅನೌನ್ಸ್ ಮಾಡಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಕ್ಕೆ ಬಲಿಷ್ಠ ಆಟಗಾರರನ್ನ ಆಯ್ಕೆಮಾಡಿದೆ. ಫಿಟ್ನೆಸ್ ವಿಚಾರದಲ್ಲೂ ಪಾಕಿಸ್ತಾನ ರಾಜಿಯಾಗಿಲ್ಲ.
ಲಾಹೋರ್(ಸೆ.04): ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿಗೆ ಸಿದ್ದತೆ ಆರಂಭಗೊಂಡಿದೆ. ಏಷ್ಯಾ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ತಂಡಗಳು ತಮ್ಮ ತಮ್ಮ ತಂಡ ಪ್ರಕಟಿಸುತ್ತಿದೆ. ಈಗಾಗಲೇ ಟೀಂ ಇಂಡಿಯಾ ಏಷ್ಯಾಕಪ್ ಟೂರ್ನಿಗೆ ತಂಡ ಪ್ರಕಟಿಸಿದೆ. ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಏಷ್ಯಾ ಟೂರ್ನಿಗ ತಂಡ ಪ್ರಕಟಿಸಿದೆ.
ಏಷ್ಯಾಕಪ್ ಟೂರ್ನಿ ಗೆಲ್ಲೋ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿರುವ ಪಾಕಿಸ್ತಾನ ಬಲಿಷ್ಠ ತಂಡ ಪ್ರಕಟಿಸಿದೆ. 16 ಸದಸ್ಯರ ತಂಡದಲ್ಲಿ ಸ್ಟಾರ್ ಸ್ಪಿನ್ನ ಇಮಾದ್ ವಾಸಿಮ್ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಯೋಯೋ ಟೆಸ್ಟ್ ಪಾಸಾಗದ ಇಮಾದ್ ಏಷ್ಯಾಕಪ್ ಟೂರ್ನಿ ಮಿಸ್ ಮಾಡಿಕೊಂಡಿದ್ದಾರೆ.
ಸೆಪ್ಟೆಂಬರ್ 15 ರಿಂದ ದುಬೈನಲ್ಲಿ ಆರಂಭಗೊಳ್ಳಲಿರುವ ಏಷ್ಯಾಕಪ್ ಟೂರ್ನಿಯಲ್ಲಿ ಸರ್ಫರಾಜ್ ಖಾನ್ ಪಾಕಿಸ್ತಾನ ತಂಡವನ್ನ ಮುನ್ನಡೆಸಲಿದ್ದಾರೆ. ಇನ್ನುಳಿದಂತೆ ಹಿರಿಯ ಆಲ್ರೌಂಡರ್ ಶೋಯಿಬ್ ಮಲ್ಲಿಕ್ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಪಾಕಿಸ್ತಾನದ ಬ್ಯಾಟಿಂಗ್ ಶಕ್ತಿ ಫಕರ್ ಝಮಾನ್, ಆಸಿಫ್ ಆಲಿ ಹಾಗೂ ಬಾಬರ್ ಅಜಮ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಮೊಹಮ್ಮದ್ ಅಮೀರ್, ಜುನೈದ್ ಖಾನ್, ಫಹೀಮ್ ಅಶ್ರಫ್ ಸೇರಿದಂತೆ ಬಲಿಷ್ಠ ಬೌಲರನ್ನಗಳನ್ನ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಪಾಕಿಸ್ತಾನ ತಂಡ:
ಸರ್ಫರಾಜ್ ಅಹಮ್ಮದ್(ನಾಯಕ), ಫಕರ್ ಝಮನ್, ಇಮಾಮ್ ಉಲ್ ಹಕ್,ಶಾನ್ ಮಸೂದ್, ಬಾಬರ್ ಅಜಮ್, ಶೋಯಿಬ್ ಮಲ್ಲಿಕ್, ಆಸಿಫ್ ಆಲಿ, ಹ್ಯಾರಿಸ್ ಸೊಹೈಲ್, ಶದಬ್ ಖಾನ್, ಮೊಹಮ್ಮದ್ ನವಾಝ್, ಫಾಹಿಮ್ ಅಶ್ರಮ್, ಹಸನ್ ಆಲಿ, ಮೊಹಮ್ಮದ್ ಅಮೀರ್, ಜುನೈದ್ ಖಾನ್, ಉಸ್ಮಾನ್ ಶಿನ್ವಾರಿ, ಶಹೀನ್ ಶಾ ಅಫ್ರಿದಿ
