ಹಿರಿಯ ಅನುಭವಿ ಆಟಗಾರರಾದ ಶೋಯೆಬ್ ಮಲಿಕ್, ಮೊಹಮ್ಮದ್ ಹಫೀಜ್ ತಂಡದಲ್ಲಿ ಸ್ಥಾನಪಡೆಯಲು ಯಶಸ್ವಿಯಾಗಿದ್ದಾರೆ.

ಲಾಹೋರ್‌(ಏ.26): ಜೂನ್‌ 1ರಿಂದ ಆರಂಭ ಗೊಳ್ಳಲಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿಗೆ 15 ಆಟಗಾರರನ್ನೊಳಗೊಂಡ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ವಿಕೆಟ್ ಕೀಪರ್ ಬ್ಯಾಟ್ಸ್'ಮನ್ ಸರ್ಫರಾಜ್‌ ಅಹ್ಮದ್‌ ತಂಡವನ್ನು ಮುನ್ನಡೆಸಲಿದ್ದಾರೆ.

ಮಾಜಿ ನಾಯಕ ಇಂಜಮಾಮ್‌ ಉಲ್‌-ಹಕ್‌ ನೇತೃತ್ವದ ಆಯ್ಕೆ ಸಮಿತಿಯು ತಂಡವನ್ನು ಪ್ರಕಟಿಸಿತು. ವಿಕೆಟ್‌ ಕೀಪರ್‌ ಕಮ್ರಾನ್‌ ಅಕ್ಮಲ್‌ ತಂಡದಿಂದ ಹೊರಬಿದ್ದರೆ ಅವರ ಸಹೋದರ ಉಮರ್‌ ಅಕ್ಮಲ್‌ ಹಾಗೂ ಮಾಜಿ ನಾಯಕ ಅಜರ್‌ ಅಲಿ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಹಿರಿಯ ಅನುಭವಿ ಆಟಗಾರರಾದ ಶೋಯೆಬ್ ಮಲಿಕ್, ಮೊಹಮ್ಮದ್ ಹಫೀಜ್ ತಂಡದಲ್ಲಿ ಸ್ಥಾನಪಡೆಯಲು ಯಶಸ್ವಿಯಾಗಿದ್ದಾರೆ.

ಪಾಕಿಸ್ತಾನ ತಂಡವು ಬಿ ಗುಂಪಿನಲ್ಲಿ ಸ್ಥಾನಪಡೆದಿದ್ದು, ಇದೇ ಗುಂಪಿನಲ್ಲಿ ಭಾರತ, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡವೂ ಸ್ಥಾನಪಡೆದಿದೆ. ಪಾಕಿಸ್ತಾನ ತಂಡವು ಚಾಂಪಿಯನ್ಸ್ ಟ್ರೋಫಿಯಲ್ಲಿ ಜೂನ್ 4ರಂದು ಮೊದಲ ಪಂದ್ಯದಲ್ಲೇ ಸಾಂಪ್ರದಾಯಿಕ ಎದುರಾಳಿ ಹಾಗೂ ಹಾಲಿ ಚಾಂಪಿಯನ್ ಭಾರತವನ್ನು ಎದುರಿಸಲಿದೆ. 

ತಂಡದವಿವರ:

ಸರ್ಫರಾಜ್‌ ಅಹ್ಮದ್‌ (ನಾಯಕ), ಅಜರ್‌ ಅಲಿ, ಅಹ್ಮದ್‌ ಶಹಜಾದ್‌, ಮೊಹಮದ್‌ ಹಫೀಜ್‌, ಬಾಬರ್‌ ಅಜಾಮ್‌, ಶೋಯೆಬ್‌ ಮಲಿಕ್‌, ಉಮರ್‌ ಅಕ್ಮಲ್‌, ಫಖರ್‌ ಝಮಾನ್‌, ಇಮಾದ್‌ ವಸೀಂ, ಹಸನ್‌ ಅಲಿ, ಫಲೀಂ ಆಶ್ರಫ್‌, ವಾಹಬ್‌ ರಿಯಾಜ್‌, ಮೊಹಮದ್‌ ಆಮಿರ್‌, ಜುನೈದ್‌ ಖಾನ್‌, ಶಾದಾಬ್‌ ಖಾನ್‌.