ಬಾಂಗ್ಲಾದೇಶ ವಿರುದ್ಧದ ಗೆಲುವನ್ನ ಸಂಭ್ರಮಿಸಲು ಹೋದ ಟಿವಿ ನಿರೂಪಕ ಇದೀಗ ಭಾರಿ ಟೀಕೆಗೆ ಗುರಿಯಾಗಿದ್ದಾನೆ. ಕಾರ್ಯಕ್ರಮ ನೇರಪ್ರಸಾರದಲ್ಲಿರುವುದನ್ನ ಅರಿಯದ ನಿರೂಪಕ ಅಶ್ಲೀಲ ಸನ್ನೆ ಮಾಡೋ ಮೂಲಕ ಪಾಕಿಸ್ತಾನ ಆ್ಯಂಕರ್  ವೈರಲ್ ಆಗಿದ್ದಾನೆ. ಇಲ್ಲಿದೆ ವೀಡಿಯೋ

ಕರಾಚಿ(ಸೆ.25): ಕ್ರಿಕೆಟ್ ಪಂದ್ಯದಲ್ಲಿ ಆಟಗಾರನಾಗಲಿ, ಅಭಿಮಾನಿಯಾಗಲಿ ಏನೇ ಯಡವಟ್ಟು ಮಾಡಿದರೂ ಪರಿಣಾಮ ಮಾತ್ರ ಊಹಿಸಲು ಅಸಾಧ್ಯ. ಇದೀಗ ಏಷ್ಯಾಕಪ್ ಟೂರ್ನಿಯಲ್ಲಿ ಎಲ್ಲೆ ಮೀರಿ ವರ್ತಿಸಿದ ಪಾಕಿಸ್ತಾನ ಟಿವಿ ಆ್ಯಂಕರ್ ಭಾರಿ ಸುದ್ದಿಯಾಗಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಏಷ್ಯಾಕಪ್ ಪಂದ್ಯದಲ್ಲಿ ಪಾಕಿಸ್ತಾನ ಪ್ರಯಾಸದ ಗೆಲುವು ಸಾಧಿಸಿತು. ಸೋಲಿನ ಭೀತಿಯಲ್ಲಿದ್ದ ಪಾಕ್ ಅಂತಿಮ ಕ್ಷಣದಲ್ಲಿ ಗೆಲುವಿನ ನಗೆ ಬೀರಿತ್ತು. ಈ ಗೆಲುವನ್ನ ಸಂಭ್ರಮಿಸಲು ಹೋದ ಪಾಕಿಸ್ತಾನ ಟಿವಿ ನಿರೂಪಕ ಇದೀಗ ಟೀಕೆಗೆ ಗುರಿಯಾಗಿದ್ದಾರೆ.

Scroll to load tweet…

ಏಷ್ಯಾಕಪ್ ಟೂರ್ನಿ ವಿಶೇಷ ಕಾರ್ಯಕ್ರಮದ ನಿರೂಪಕ ನೇರಪ್ರಸಾರದಲ್ಲಿದ್ದೇನೆ ಎಂಬುದನ್ನೇ ಮರೆತು ಮಧ್ಯದ ಬೆರಳು ತೋರಿಸಿದ್ದಾರೆ. ಪಕ್ಕದಲ್ಲಿದ್ದ ಮಹಿಳಾ ನಿರೂಪಕಿಗೆ ನಗು ತಡೆಯಲಾಗಲಿಲ್ಲ. ತಕ್ಷಣವೇ ಎಚ್ಚತ್ತ ಕಾರ್ಯಕ್ರಮ ನಿರ್ಮಾಪಕ ನೇರಪ್ರಸಾರದಲ್ಲಿರುವುದನ್ನ ಸೂಚಿಸಿದ್ದಾರೆ. ಅಷ್ಟರಲ್ಲೇ ಗಂಭೀರತೆ ಅರಿತ ನಿರೂಪಕ ಮತ್ತೆ ತನ್ನ ಸುದ್ದಿ ಬಿತ್ತರ ಮುಂದುವರಿಸಿದ್ದಾನೆ.

ಒಂದು ಕ್ಷಣದ ಸಂಭ್ರಮ ಇದೀಗ ವಿಶ್ವದೆಲ್ಲೆಡೆ ವೈರಲ್ ಆಗಿದೆ. ಇಷ್ಟೇ ಅಲ್ಲ ಭಾರಿ ಟೀವಿ ನಿರೂಪಕ ಭಾರಿ ಟೀಕೆಗೆ ಗುರಿಯಾಗಿದ್ದಾನೆ.