ಜಾರ್ಜಿಯಾ(ಸೆ.06): ಭಾರತದ ಗ್ರಾಂಡ್ ಮಾಸ್ಟರ್ ಪೆಂಟಾಲ ಹರಿಕೃಷ್ಣ, ಫಿಡೆ ವಿಶ್ವಕಪ್ ಚೆಸ್ ಪಂದ್ಯಾವಳಿಯ ಪುರುಷರ ಎರಡನೇ ಸುತ್ತಿನಲ್ಲಿ ಕ್ಯೂಬಾದ ಗ್ರಾಂಡ್ ಮಾಸ್ಟರ್ ಯುರಿ ಗೊಂಜಲೆಜ್ ವಿಡಾಲ್ ಎದುರು ಟೈ ಬ್ರೇಕರ್ ಅವಕಾಶದಲ್ಲಿ ಗೆಲುವು ಪಡೆದರು. ಮುಂದಿನ ಸುತ್ತಿನಲ್ಲಿ ಹರಿಕೃಷ್ಣ ಎಸ್.ಪಿ. ಸೇತುರಾಮನ್ ಅವರನ್ನು ಎದುರಿಸಲಿದ್ದಾರೆ.

20ನೇ ಶ್ರೇಯಾಂಕದ ಚೆಸ್ ಪಟು ಭಾರತದ ಹರಿಕೃಷ್ಣ ಪಂದ್ಯವನ್ನು ಕಪ್ಪು ಕಾಯಿಗಳೊಂದಿಗೆ ಆರಂಭಿಸಿದರು. ಪಂದ್ಯದ ಪೂರ್ಣಾವಧಿಯಲ್ಲಿ ಇಬ್ಬರು ಆಟಗಾರರು ಸಮಬಲದ ಹೋರಾಟ ನೀಡಿದ್ದರಿಂದ ಡ್ರಾಗೊಂಡಿತು. ಮುಂದಿನ 2 ರಾಪಿಡ್ ಸುತ್ತಿನಲ್ಲಿ ಮತ್ತೆ ಡ್ರಾದಲ್ಲಿ ಅಂತ್ಯವಾಯಿತು.

ಇನ್ನು 4ನೇ ರಾಪಿಡ್ ಗೇಮ್‌'ನಲ್ಲಿ ಹರಿಕೃಷ್ಣ ಬಿಳಿಕಾಯಿಗಳೊಂದಿಗೆ ಆಟವಾಡಿದರು. ಬಳಿಕ ಆಕ್ರಮಣಾಕಾರಿ ಆಟವಾಡಿದ ಹರಿಕೃಷ್ಣ, ಎದುರಾಳಿ ವಿಡಾಲ್ ಎದುರು ಗೆಲುವು ಸಾಧಿಸಿದರು.