ಭಾನುವಾರದಿಂದ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ.

ಧರ್ಮಶಾಲಾ(ಅ.14): ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಆಕ್ರಮಣಾಕಾರಿ ಮತ್ತು ತೀಕ್ಷ್ಣತೆಯಿಂದ ಆಡುವ ಉದ್ದೇಶವನ್ನು ಹೊಂದಲಾಗಿದ್ದು ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದೇವೆ ಎಂದು ಭಾರತ ತಂಡದ ಆಟಗಾರ ಅಜಿಂಕ್ಯ ರಹಾನೆ ಹೇಳಿದ್ದಾರೆ.

ಇದೇ ಭಾನುವಾರದಿಂದ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಕೀವಿಸ್ ವಿರುದ್ಧದ ಟೆಸ್ಟ್ ಸರಣಿಯನ್ನು ಭಾರತ 3-0 ಯಿಂದ ಜಯಿಸಿದೆ. ಅದೇ ಆತ್ಮವಿಶ್ವಾಸದಲ್ಲಿ ಭಾರತ ತಂಡ ಪ್ರಭಾವಿ ಪ್ರದರ್ಶನದೊಂದಿಗೆ ಗೆಲುವು ಸಾಧಿಸುವ ಅನಿವಾರ್ಯತೆಯಲ್ಲಿದೆ. ಇದಕ್ಕಾಗಿ ಭಾರತ ತಂಡದ ಆಟಗಾರರು ಈಗಾಗಲೇ ಕಠಿಣ ಅಭ್ಯಾಸ ನಡೆಸಿದ್ದೇವೆ. ಅಲ್ಲದೇ ತಂಡಕ್ಕೆ ಹೊಸ ಮುಖಗಳು ಬಂದಿರುವುದು ನಿಜಕ್ಕೂ ಉತ್ಸಾಹ ಹೆಚ್ಚಿದೆ ಎಂದು ರಹಾನೆ ಹೇಳಿದ್ದಾರೆ.