ಟೆಸ್ಟ್ ಕ್ರಿಕೆಟ್‌ನಲ್ಲಿ ರದ್ದಾಗಲ್ಲ ಟಾಸ್

First Published 30, May 2018, 1:09 PM IST
oss to stay, pitch preparation to be prerogative of host member boards
Highlights

ಟೆಸ್ಟ್ ಕ್ರಿಕೆಟ್‌ನಲ್ಲಿ ಟಾಸ್ ರದ್ದು ಪಡಿಸುವ ಪ್ರಸ್ತಾಪ ಕೈಬಿಟ್ಟ ಐಸಿಸಿ. ಟಾಸ್ ಟೆಸ್ಟ್ ಕ್ರಿಕೆಟ್ ಪಂದ್ಯದ ಅವಿಭಾಜ್ಯ ಅಂಗವಾಗಿದೆ. ಹೀಗಾಗಿ ಎಂದಿನಂತೆ ಟೆಸ್ಟ್ ಪಂದ್ಯದಲ್ಲಿ ಟಾಸ್ ಪ್ರಕ್ರೀಯೆ ಮುಂದುವರಿಯಲಿದೆ ಎಂದು ಐಸಿಸಿ ಸ್ಪಷ್ಟಣೆ.

ಮುಂಬೈ: ಟೆಸ್ಟ್ ಪಂದ್ಯವನ್ನ ಮತ್ತಷ್ಟು ಸ್ಪರ್ಧಾತ್ಮಗೊಳಿಸುವ ನಿಟ್ಟಿನಲ್ಲಿ ಟಾಸ್ ಕೈಬಿಡುವ ಪ್ರಸ್ತಾಪನ್ನ ಐಸಿಸಿ ತಳ್ಳಿಹಾಕಿದೆ. ಮುಂಬೈನಲ್ಲಿ ಸಭೆ ಸೇರಿದ ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಸಮಿತಿ ಈ ನಿರ್ಧಾರ ಪ್ರಕಟಿಸಿದೆ. ಟಾಸ್ ಟೆಸ್ಟ್ ಪಂದ್ಯದ ಅವಿಭಾಜ್ಯ ಅಂಗ, ಹಿಂದಿನಂತೆ ಟೆಸ್ಟ್ ಪಂದ್ಯದಲ್ಲಿ ಟಾಸ್ ಪ್ರಕ್ರೀಯೆ ಮುಂದುವರಿಯಲಿದೆ ಎಂದು ಐಸಿಸಿ ಸಮಿತಿ ಸ್ಪಷ್ಟಪಡಿಸಿದೆ. ಆತಿಥೇಯ ತಂಡಗಳು ತವರಿನ ಮೈದಾನಗಳ ಲಾಭ ಪಡೆಯೋದನ್ನ ತಪ್ಪಿಸಲು ಟೆಸ್ಟ್ ಪಂದ್ಯದಲ್ಲಿ ಟಾಸ್ ಪ್ರಕ್ರೀಯೆ ಕೈಬಿಡಲು ಮನವಿ ಮಾಡಲಾಗಿತ್ತು. ಟಾಸ್ ರದ್ದಾದರೆ ಪ್ರವಾಸಿ ತಂಡಕ್ಕೆ ಹೆಚ್ಚಿನ ಆದ್ಯತೆ ಸಿಗಲಿದೆ. ತವರಿನ ತಂಡಗಳು ತಮಗೆ ಬೇಕಾದ ಪಿಚ್ ಸಿದ್ಧಪಡಿಸಿ ಅನೂಕೂಲ ಪಡೆಯುವುದು ತಪ್ಪುತ್ತದೆ ಅನ್ನೋದು ಒಂದು ವಾದ. 


1877ರಲ್ಲಿ ಟೆಸ್ಟ್ ಆರಂಭವಾದಗಿನಿಂದಲೂ ಟಾಸ್ ಪ್ರಕ್ರೀಯ ಪಂದ್ಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ. ಇಂಗ್ಲೀಷ್ ಕೌಂಟಿ ಕ್ರಿಕೆಟ್‌ನಲ್ಲಿ 2016ರಿಂದಲೇ ಟಾಸ್ ಪ್ರಕ್ರೀಯೆಯನ್ನ ಕೈಬಿಡಲಾಗಿದೆ. ಆದರೆ ನೂತನ ನಿಯಮದಿಂದ ಇಂಗ್ಲೀಷ್ ಕೌಂಟಿ ಪಂದ್ಯದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಹೀಗಾಗಿ ಟಾಸ್ ರದ್ದು ಪಡಿಸಲು ಸಾಧ್ಯವಿಲ್ಲ ಎಂದು ಐಸಿಸಿ ಹೇಳಿದೆ. ಇದರೊಂದಿಗೆ ಮೈದಾನದಲ್ಲಿ ಅನುಚಿತವಾಗಿ ವರ್ತಿಸುವ ಆಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಮಿತಿ ಶಿಫಾರಸು ಮಾಡಿದೆ. 

loader