ನಾಳೆ ಬೆಂಗಳೂರಿನಲ್ಲಿ ಕ್ರಿಕೆಟ್ ಹಬ್ಬ. ಅದು ಬರೋಬ್ಬರಿ 4 ವರ್ಷಗಳ ನಂತ್ರ. ಅಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬೌಂಡರಿ-ಸಿಕ್ಸರ್​ಗಳ ಚಿತ್ತಾರ ಬಿಡಿಸಿದ್ದ ಉಭಯ ತಂಡಗಳ ಆಟಗಾರರು ಇಂದು ಅದನ್ನ ರಿಪೀಟ್ ಮಾಡ್ತಾವಾ..? 4  ವರ್ಷಗಳ ಹಿಂದಿನ ಪಂದ್ಯದಲ್ಲಿ ಏನಾಗಿತ್ತು. ಅಂದು ವಿನಯ್'​ಗೆ ಯಾಕೆ ಕಡೆ ಪಂದ್ಯವಾಯ್ತು. ರೋಹಿತ್ ಶರ್ಮಾ ಡಬಲ್ ಸೆಂಚುರಿ ಹೇಗಿತ್ತು? ಇಲ್ಲಿದೆ ವಿವರ 

ಬರೋಬ್ಬರಿ 4 ವರ್ಷಗಳ ಬಳಿಕ ಏಕದಿನ ಪಂದ್ಯಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸ್ತಿದೆ. ವಿಪರ್ಯಾಸವೆಂದ್ರೆ 2013ರಲ್ಲಿ ಮುಖಾಮುಖಿಯಾಗಿದ್ದ ಭಾರತ-ಆಸ್ಟ್ರೇಲಿಯಾ ತಂಡಗಳೇ 2017ರಲ್ಲೂ ಮುಖಾಮುಖಿಯಾಗ್ತಿವೆ. ಆ ಪಂದ್ಯ ವೀಕ್ಷಿಸಿದ್ದ ಕರ್ನಾಟಕ ಕ್ರಿಕೆಟ್ ಅಭಿಮಾನಿಗಳು ಇನ್ನೊಂದು ಪಂದ್ಯ ವೀಕ್ಷಿಸಲು 4 ವರ್ಷ ಕಾಯಬೇಕಾಯ್ತು. ಜತನದಿಂದ ಕಾಯುತ್ತಿದ್ದ ಸಮಯಕ್ಕೆ ಕ್ಷಣಗಣನೆ ಶುರುವಾಗಿದೆ. ಇದಕ್ಕಾಗಿ ಚಿನ್ನಸ್ವಾಮಿ ಸ್ಟೇಡಿಯಂ ಸಹ ಸಿದ್ದಗೊಂಡಿದೆ.

ಎಂದೂ ಮರೆಯಲಾಗದ ಆ ಪಂದ್ಯ: 95.1 ಓವರ್​ನಲ್ಲಿ ಬಂದಿದ್ವು 709 ರನ್

2013 ಅಕ್ಟೋಬರ್​ 2ರಂದು ನಡೆದ ಆ ಪಂದ್ಯವನ್ನ ಯಾರೋಬ್ಬರೂ ಮುರಿಯಲು ಸಾಧ್ಯವಿಲ್ಲ. ಯಾರೂ ಮರೆತ್ರೂ ರೋಹಿತ್ ಶರ್ಮಾ, ವಿನಯ್ ಕುಮಾರ್​ ಮತ್ತು ಆಸೀಸ್ ಆಟಗಾರರು ಮರೆಯೋಲ್ಲ. ಅಂದು ಮುಂಬೈಕರ್ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳಿಗೆ ಬೌಂಡ್ರಿ-ಸಿಕ್ಸರ್​ಗಳ ರಸದೌತಣ ಬಡಿಸಿದ್ದರು. ಅದು ಯಾವ ಮಟ್ಟಕ್ಕೆ ಅಂದ್ರೆ ಅವರು ಹೊಡೆದಿದೆಲ್ಲಾ ಬರೀ ಬೌಂಡ್ರಿ-ಸಿಕ್ಸರ್​ಗಳೇ.

ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಬರೋಬ್ಬರಿ 383 ರನ್​ ಕಲೆಹಾಕ್ತು. ರೋಹಿತ್ ಶರ್ಮಾ ಏಕದಿನ ಕ್ರಿಕೆಟ್​ನಲ್ಲಿ ಚೊಚ್ಚಲ ದ್ವಿಶತಕ ಬಾರಿಸಿ ಸಂಭ್ರಮಿಸಿದ್ರು. 12 ಬೌಂಡರಿ ಮತ್ತು 16 ಸಿಕ್ಸ್ ಸಿಡಿಸಿದ್ರು. ಒಂದು ಇನ್ನಿಂಗ್ಸ್​​ನಲ್ಲಿ ಗರಿಷ್ಠ ಸಿಕ್ಸ್ ಸಿಡಿಸಿದ ವಿಶ್ವದಾಖಲೆಯನ್ನೂ ರೋಹಿತ್ ಮಾಡಿದ್ರು. ರೋಹಿತ್​​ಗೆ ಧವನ್, ರೈನಾ, ಧೋನಿ ಸಾಥ್ ನೀಡಿದ್ದರು.

ಕನ್ನಡಿಗ ವಿನಯ್ ಕೆರಿಯರ್ ಕ್ಲೋಸ್ ಮಾಡಿದ ಪಂದ್ಯ

384 ರನ್ ಬೆನ್ನಟ್ಟಿದ ಆಸ್ಟ್ರೇಲಿಯಾ ಸಹ ಭಾರತೀಯ ಬೌಲರ್​ಗಳನ್ನ ಹಿಗ್ಗಾಮುಗ್ಗ ದಂಡಿಸಿದ್ದರು. ಟಾಪ್ ಆರ್ಡರ್​ ಬ್ಯಾಟ್ಸ್​ಮನ್​ಗಳು ವಿಫಲವಾದ್ರೂ ಆಲ್​ರೌಂಡರ್ಸ್ ಮಾತ್ರ ನಮ್ಮ ಬೌಲರ್​ಗಳನ್ನ ಸುಮ್ಮನೆ ಬಿಡಲಿಲ್ಲ. ಮ್ಯಾಕ್ಸ್​'ವೆಲ್, ವ್ಯಾಟ್ಸನ್ ಮತ್ತು ಫಾಲ್ಕನರ್​ ರನ್ ಹೊಳೆಯನ್ನೇ ಹರಿಸಿದ್ರು.

ಆದ್ರೂ 326 ರನ್​ಗೆ ಆಸೀಸ್ ಆಲೌಟ್ ಆಗಿತ್ತು. ಅದೇ ಪಂದ್ಯ ಕನ್ನಡಿಗ ವಿನಯ್ ಕುಮಾರ್ ಕೆರಿಯರ್ ಹಾಳು ಮಾಡ್ತು. ಆ ಪಂದ್ಯದಲ್ಲಿ 9 ಓವರ್​ ಬೌಲಿಂಗ್ ಮಾಡಿದ್ದ ವಿನಯ್​, 102 ರನ್ ಬಿಟ್ಟುಕೊಟ್ಟಿದ್ದರು. ಅದೇ ಕೊನೆ ವಿನಯ್ ಮತ್ತೆ ಟೀಂ ಇಂಡಿಯಾ ಪರ ಆಡಲೇ ಇಲ್ಲ.

ಈ ಸಲವೂ ಹರಿಯುತ್ತಾ ರನ್ ಹೊಳೆ..?

4 ವರ್ಷಗಳ ಹಿಂದೆ ಆಡಿದ್ದ ಬಹುತೇಕ ಆಟಗಾರರು ಈ ಪಂದ್ಯದಲ್ಲೂ ಆಡ್ತಿದ್ದಾರೆ. ಅಂದು 709 ರನ್ ಹೊಡೆದಿದ್ದ ಉಭಯ ತಂಡಗಳು ಈ ಸಲವೂ ರನ್ ಹೊಳೆ ಹರಿಸ್ತಾವಾ..? 4 ವರ್ಷಗಳ ನಂತ್ರ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳಿಗೆ ಅಂತಹದ್ದು ಕಿಕ್ ಸಿಗುತ್ತಾ..? ನೋಡಬೇಕು.