ಲಿಂಪಿಕ್ಸ್‌: ಸ್ವೀಡನ್‌ ತಂಡದಲ್ಲಿ ಬೆಂಗ್ಳೂರು ಹುಡುಗಿ

Olympics Bengaluru girl to take part in Sweden team
Highlights

ಒಲಿಂಪಿಕ್ಸ್‌ನಲ್ಲಿ ಭಾರತದ ಸಾಧನೆ ಹೇಳುವಂಥದ್ದೇನೂ ಇಲ್ಲ. ಆದರೆ, ಕನ್ನಡದ ಬಾಲಕಿ ಸ್ವೀಟನ್ ದೇಶದಿಂದ ಪ್ರತಿನಿಧಿಸುತ್ತಿದ್ದಾಳೆ. ಯಾರು, ಯಾವ ಸ್ಪರ್ಧೆಗೆ?

ಬೆಂಗಳೂರು: 2018ರ ಕಿರಿಯರ (ಅಂಡರ್‌-17) ಒಲಿಂಪಿಕ್ಸ್‌ಗೆ ಸ್ವೀಡನ್‌ ಬ್ಯಾಡ್ಮಿಂಟನ್‌ ತಂಡದಲ್ಲಿ ಬೆಂಗಳೂರಿನ ಅಶ್ವತ್ಥಿ ಪಿಳ್ಳೈ ಸ್ಥಾನ ಪಡೆದಿದ್ದಾರೆ. ಮೂಲತಃ ತಮಿಳುನಾಡಿನ ಕನ್ಯಾಕುಮಾರಿಯವರಾದರೂ, ಅಶ್ವತ್ಥಿ 4ನೇ ತರಗತಿ ವರೆಗೂ ಬೆಂಗಳೂರು ಎನ್‌ಪಿಎಸ್‌ ಶಾಲೆಯಲ್ಲಿ ಓದಿದರು.

17 ವರ್ಷದ ಅವರು, ಫ್ರೆಬ್ರವರಿಯಲ್ಲಿ ಸ್ವೀಡನ್‌ ರಾಷ್ಟ್ರೀಯ ಚಾಂಪಿಯನ್‌ಶಿಪ್‌ ಗೆದ್ದು, ಈ ಸಾಧನೆ ಮಾಡಿದ ಅತಿ ಕಿರಿಯ ಆಟಗಾರ್ತಿ ಎನಿಸಿಕೊಂಡರು. ಸ್ವೀಡನ್‌ನ ಶ್ರೇಷ್ಠ ಶಟ್ಲರ್‌ಗಳ ಪೈಕಿ ಒಬ್ಬರೆನಿಸಿರುವ ಅಶ್ವತ್ಥಿ, ವರ್ಷದಲ್ಲಿ ಒಂದು ತಿಂಗಳು ಬೆಂಗಳೂರಲ್ಲಿರುವ ಪ್ರಕಾಶ್‌ ಪಡುಕೋಣೆ ಬ್ಯಾಡ್ಮಿಂಟನ್‌ ಕೇಂದ್ರದಲ್ಲಿ ಸ್ವತಃ ಪ್ರಕಾಶ್‌ರಿಂದ ತರಬೇತಿ ಪಡೆಯಲಿದ್ದಾರೆ.

loader