ಟೋಕಿಯೋ(ಆ.21): ಒಲಿಂಪಿಕ್‌ ಪರೀಕ್ಷಾರ್ಥ ಹಾಕಿ ಟೂರ್ನಿಯಲ್ಲಿ ಭಾರತ ಪುರುಷ ಹಾಗೂ ಮಹಿಳಾ ತಂಡಗಳು ಫೈನಲ್‌ ಪ್ರವೇಶಿಸಿವೆ. 

4ನೇ ದಿನವಾದ ಮಂಗಳವಾರ ಪುರುಷರ ಆತಿಥೇಯ ಜಪಾನ್‌ ಎದುರು 6-3 ಗೋಲುಗಳಲ್ಲಿ ಗೆಲುವು ಸಾಧಿಸಿತು. ಭಾರತದ ಪರ ಮನ್‌ದೀಪ್‌ ಸಿಂಗ್‌ (9, 29, 30ನೇ ನಿ.) ಹ್ಯಾಟ್ರಿಕ್‌ ಗೋಲು ಬಾರಿಸಿದರೆ, ನೀಲಕಂಠ (3ನೇ ನಿ.), ನೀಲಮ್‌ (7ನೇ ನಿ.), ಗುರುಸಾಹಿಬ್‌ಜಿತ್‌ (41ನೇ ನಿ.) ಇನ್ನುಳಿದ 3 ಗೋಲು ಗಳಿಸಿದರು. 

ಒಲಿಂಪಿಕ್‌ ಟೆಸ್ಟ್‌ ಹಾಕಿ: ಭಾರತ ಶುಭಾರಂಭ

ಬುಧವಾರ ಭಾರತ, ಫೈನಲ್‌ನಲ್ಲಿ ನ್ಯೂಜಿಲೆಂಡ್‌ ಎದುರು ಸೆಣಸಲಿದೆ. ಭಾರತ ಮಹಿಳಾ ತಂಡ ಚೀನಾ ವಿರುದ್ಧ ಗೋಲು ರಹಿತ ಡ್ರಾಗೆ ತೃಪ್ತಿಪಟ್ಟಿತು. ಭಾರತ ಮಹಿಳಾ ಫೈನಲ್‌ನಲ್ಲಿ ಜಪಾನ್‌ ವಿರುದ್ಧ ಆಡಲಿದೆ.