Murder Case: ಕುಸ್ತಿಪಟು ಸುಶೀಲ್ ಕುಮಾರ್‌ಗೆ ಜಾಮೀನು ನಿರಾಕರಣೆ
* ಕೊಲೆ ಪ್ರಕರಣದ ಆರೋಪಿ ಸುಶೀಲ್ ಕುಮಾರ್‌ಗೆ ನಿರಾಸೆ
* ಕುಸ್ತಿಪಟು ಸಾಗರ್ ಧನ್‌ಕರ್ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಕುಸ್ತಿಪಟು ಸುಶೀಲ್
* ದೆಹಲಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ ಮೇ.04ರಂದು ನಡೆದ ಕೊಲೆ
ನವದೆಹಲಿ(ಅ.06): ಕುಸ್ತಿಪಟು ಸಾಗರ್ ಧನ್‌ಕರ್ (Sagar Dhankar) ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ (Sushil Kumar) ಗೆ ಜಿಲ್ಲಾ ರೋಹಿಣಿ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ.
ಮೇ 4ರಂದು ದೆಹಲಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ ನಡೆದ ಧನ್‌ಕರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 23ರಂದು ಸುಶೀಲ್ ಬಂಧನಕ್ಕೊಳಗಾಗಿದ್ದರು. ಸೋಮವಾರ ಸುಶೀಲ್ ಕುಮಾರ್ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಬಳಿಕ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶಿವಾಜಿ ಆನಂದ್ ಜಾಮೀನು ನೀಡಲು ನಿರಾಕರಿಸಿದರು.
ಕಬಡ್ಡಿ ಅಭಿಮಾನಿಗಳಿಗೆ ಗುಡ್ ನ್ಯೂಸ್: ಬೆಂಗಳೂರಿನಲ್ಲೇ ನಡೆಯಲಿದೆ ಸಂಪೂರ್ಣ ಪ್ರೊ ಕಬಡ್ಡಿ ಲೀಗ್..!
ಈ ನಡುವೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯದಲ್ಲೇ ಮತ್ತೊಂದು ಚಾಜ್‌ರ್‍ಶೀಟ್ ಸಲ್ಲಿಸಲಾಗುವುದು ಎಂದು ಪೊಲೀಸರು ದೆಹಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆಗಸ್ಟ್ 2ರಂದು ಸಲ್ಲಿಸಲಾಗಿರುವ ಮೊದಲ ಚಾಜ್‌ರ್‍ಶೀಟ್‌ನಲ್ಲಿ 13 ಮಂದಿಯನ್ನು ಕೊಲೆ ಆರೋಪಿಗಳೆಂದು ಹೆಸರಿಸಲಾಗಿದೆ. ಇದರಲ್ಲಿ ಸುಶೀಲ್ ಪ್ರಮುಖ ಆರೋಪಿ ಎಂದು ಉಲ್ಲೇಖಿಸಲಾಗಿತ್ತು.
ವಿಶ್ವ ಶೂಟಿಂಗ್‌ನಲ್ಲಿ 14ರ ನಾಮ್ಯಗೆ ಚಿನ್ನದ ಪದಕ!
ಲಿಮಾ(ಪೆರು): ಐಎಸ್‌ಎಸ್‌ಎಫ್ ಕಿರಿಯರ ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ (ISSF Shooting) ಭಾರತದ 14 ವರ್ಷದ ನಾಮ್ಯ ಕಪೂರ್ ಚಿನ್ನದ ಪದಕ ಗೆದ್ದು ಇತಿಹಾಸ ಬರೆದಿದ್ದಾರೆ. ಮಹಿಳೆಯರ 25 ಮೀ. ಪಿಸ್ತೂಲ್ ಸ್ಪರ್ಧೆಯ ಫೈನಲ್‌ನಲ್ಲಿ ಮೊದಲ ಸ್ಥಾನ ಪಡೆದ ನಾಮ್ಯ, ವಿಶ್ವಕಪ್‌ನಲ್ಲಿ ಪದಕ ಗೆದ್ದ ಭಾರತದ ಅತಿಕಿರಿಯ ಶೂಟರ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.
ಇದೇ ಸ್ಪರ್ಧೆಯಲ್ಲಿ ತಾರಾ ಶೂಟರ್ ಮನು ಭಾಕರ್ (Manu Bhaker) ಕಂಚು ಜಯಿಸಿದರು. ಇನ್ನು ಪುರುಷರ 50 ಮೀ. ರೈಫಲ್ 3 ಪೊಸಿಷನ್ ಫೈನಲ್‌ನಲ್ಲಿ ವಿಶ್ವ ದಾಖಲೆಯ 463.4 ಅಂಕ ಗಳಿಸಿದ ಐಶ್ವರ್ಯ ಸಿಂಗ್ ತೋಮರ್ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಭಾರತ ಕೂಟದಲ್ಲಿ 8 ಚಿನ್ನ, 6 ಬೆಳ್ಳಿ ಹಾಗೂ 3 ಕಂಚು ಸೇರಿ ಒಟ್ಟು 17 ಪದಕಗಳನ್ನು ಗೆದ್ದು ಮೊದಲ ಸ್ಥಾನದಲ್ಲಿದೆ.