ಲಂಡನ್(ಮೇ.18): 2019ರ ಏಕದಿನ ವಿಶ್ವಕಪ್‌ನ ಅಧಿಕೃತ ಗೀತೆಯನ್ನು ಐಸಿಸಿ ಶುಕ್ರವಾರ ಬಿಡುಗಡೆ ಮಾಡಿತು.

‘ಸ್ಟ್ಯಾಂಡ್‌ ಬೈ’ ಹೆಸರಿನ ಈ ಗೀತೆಯನ್ನು ಹೊಸ ಕಲಾವಿದ ಲಾರಿನ್‌ ಹಾಗೂ ಬ್ರಿಟನ್‌ನ ಅತ್ಯಂತ ಯಶಸ್ವಿ ಹಾಗೂ ಪರಿಣಾಮಕಾರಿ ಸಂಗೀತ ಬ್ಯಾಂಡ್‌ ರುಡಿಮೆಂಟಲ್‌ ಒಟ್ಟಾಗಿ ರಚಿಸಿವೆ.

ಹೀಗಿದೆ ನೋಡಿ ವಿಶ್ವಕಪ್ ಗೀತೆ:

ಮೇ 30ರಿಂದ ಇಂಗ್ಲೆಂಡ್‌ನಲ್ಲಿ ವಿಶ್ವಕಪ್‌ ಅರಂಭಗೊಳ್ಳಲಿದ್ದು, ವಿಶ್ವಕಪ್‌ ಪಂದ್ಯಗಳು ನಡೆಯುವ ಎಲ್ಲಾ 11 ಕ್ರೀಡಾಂಗಣಗಳಲ್ಲಿ ಈ ಗೀತೆಯನ್ನು ಪ್ರಸಾರ ಮಾಡಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ. ಐಸಿಸಿ ತನ್ನ ವೆಬ್‌ಸೈಟ್‌ನಲ್ಲಿ ಈ ಗೀತೆಯನ್ನು ಹಾಕಿದ್ದು, ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.

ವಿಶ್ವಕಪ್ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ..

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.