ವಿಂಬಲ್ಡನ್ ಟೂರ್ನಿಯಿಂದ ಹಿಂದೆ ಸರಿಯುತ್ತಾರಾ ಜೊಕೋವಿಚ್?

First Published 6, Jun 2018, 8:51 PM IST
Novak Djokovic may skip Wimbledon after French Open knockout
Highlights

ವಿಶ್ವದ ಮೊದಲ ಶ್ರೇಯಾಂಕಿತ ಟೆನಿಸ್ ಪ್ಲೇಯರ್ ಸರ್ಬಿಯಾದ ನೋವಾಕ್ ಜೊಕೋವಿಚ್ ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ. ಮುಂಬರುವ ಪ್ರತಿಷ್ಠಿತ ವಿಂಬಲ್ಡನ್ ಟೂರ್ನಿಯಿಂದ ಜೊಕೋವಿಚ್ ಹಿಂದೆ ಸರಿಯುವ ಮಾತುಗಳನ್ನಾಡಿದ್ದಾರೆ. ಜೊಕೋವಿಚ್ ದಿಢೀರ್ ನಿರ್ಧಾರಕ್ಕೆ ಕಾರಣಗಳು ಇಲ್ಲಿದೆ.

ಪ್ಯಾರಿಸ್(ಜೂನ್.6): ಫ್ರೆಂಚ್ ಓಪನ್ ಟೂರ್ನಿಯಲ್ಲಿನ ಸೋಲಿನ ಆಘಾತ ಅನುಭವಿಸಿದ ಸರ್ಬಿಯಾದ ನೋವಾಕ್ ಜೊಕೋವಿಚ್ ಇದೀಗ ಮುಂಬರುವ ಪ್ರತಿಷ್ಠಿತ ವಿಂಬಲ್ಡನ್ ಟೂರ್ನಿಯಿಂದ ಹಿಂದೆ ಸರಿಯೋ ಸೂಚನೆ ನೀಡಿದ್ದಾರೆ.

ಪ್ಯಾರಿಸ್‌ನಲ್ಲಿ ನಡೆದ ಫ್ರೆಂಚ್ ಓಪನ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೊವಾಕ್ ಜೋಕೊವಿಚ್, ಇಟಲಿಯ ಮಾರ್ಕೋ ಸೆಚಿನಾಟೋ ವಿರುದ್ಧ 6-3,7-6, 1-6 ಹಾಗೂ 7-6   ಅಂತರದಲ್ಲಿ ಸೋಲು ಅನುಭವಿಸಿದರು. ಸೋಲಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೊಕೋವಿಚ್,ವಿಂಬಲ್ಡನ್ ಟೂರ್ನಿ ಆಡೋ ಕುರಿತು ಸ್ಪಷ್ಟತೆ ಇಲ್ಲ ಎಂದಿದ್ದಾರೆ. 

ವಿಶ್ವ ಟೆನಿಸ್ ಟೂರ್ನಿ ಮೊದಲ ಶ್ರೇಯಾಂಕಿತ ನೊವಾಕ್ ಜೊಕೋವಿಚ್, 72ನೇ ಶ್ರೇಯಾಂಕಿತ ಮಾರ್ಕೋ ವಿರುದ್ಧ ಸೋಲು ಅನುಭವಿಸಿರೋದು ತೀವ್ರ ಆಘಾತ ನೀಡಿದೆ. ಹೀಗಾಗಿ ವಿಂಬಲ್ಡನ್ ಟೂರ್ನಿಯಿಂದ ಹಿಂದೆ ಸರಿಯೋ ಮಾತುಗಳನ್ನಾಡಿದ್ದಾರೆ.
 

loader