ಅಸಭ್ಯ ಹೇಳಿಕೆ ಈ ಮಟ್ಟಕ್ಕೆ ಅಪಾಯ ತಂದೊಡ್ಡುತ್ತೆ ಅನ್ನೋ ಸಣ್ಣ ಜ್ಞಾನವೂ ಹಾರ್ದಿಕ್ ಪಾಂಡ್ಯಗೆ ಇರಲಿಲ್ಲ. ಇದೀಗ ಈ ಘಟನೆ ಹಾರ್ದಿಕ್ ಕ್ರಿಕೆಟ್ ಕರಿಯರ್‌ಗೆ ಮುಳುವಾಗಿದೆ. ಅಮಾನತು ಬಳಿಕ ಹಾರ್ದಿಕ್ ಪಾಂಡ್ಯ ಪರಿಸ್ಥಿತಿ ಹೇಗಿದೆ? ಸ್ವತಃ ಹಾರ್ದಿಕ್ ತಂದೆ ಬಹಿರಂಗ ಪಡಿಸಿದ್ದಾರೆ. 

ಸೂರತ್(ಜ.16): ಅಸಭ್ಯ ಹೇಳಿಕೆಯಿಂದ ಅಮಾನತಾಗಿರುವ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಮಾನತಿನಿಂದ ತವರಿಗೆ ಮರಳಿದ ಪಾಂಡ್ಯ ನೇರವಾಗಿ ಮನೆ ಸೇರಿಕೊಂಡಿದ್ದಾರೆ. ಇದೀಗ ಮನೆಯಿಂದ ಹೊರಗೆ ಬರುತ್ತಿಲ್ಲ. ಯಾರ ಜೊತೆಗೂ ಮಾತನಾಡುತ್ತಿಲ್ಲ ಎಂದು ಪಾಂಡ್ಯ ತಂದೆ ಹಿಮಾಂಶು ಪಾಂಡ್ಯ ಹೇಳಿದ್ದಾರೆ. 

Add Asianetnews Kannada as a Preferred SourcegooglePreferred

ಇದನ್ನೂ ಓದಿ: ಬ್ಯಾಡ್ ಟಾಕ್: ಟೀಕೆಗಳಿಂದ ಸುಸ್ತಾದ ರಾಹುಲ್ -ಹಾರ್ದಿಕ್

ಆಸ್ಟ್ರೇಲಿಯಾ ವಿರುದ್ದದ 2ನೇ ಏಕದಿನ ಪಂದ್ಯ ವೀಕ್ಷಿಸಿದ ಪಾಂಡ್ಯ ಯಾರ ಜೊತೆಗೂ ಮಾತನಾಡಿಲ್ಲ. ಕುಟುಂಬದ ಸದಸ್ಯರ ಜೊತೆಗೂ ಯಾವುದೇ ಮಾತುಕತೆಯಿಲ್ಲ. ಯಾವುದೇ ಫೋನ್ ಕರೆಗಳನ್ನೂ ಸ್ವೀಕರಿಸುತ್ತಿಲ್ಲ. ಘಟನೆಯಿಂದ ತುಂಬಾ ನೊಂದಿದ್ದಾನೆ ಎಂದಿದ್ದಾರೆ.

ಇದನ್ನೂ ಓದಿ:ಬೇಷರತ್‌ ಕ್ಷಮೆಯಾಚಿಸಿದ ಹಾರ್ದಿಕ್‌ ಪಾಂಡ್ಯ, ರಾಹುಲ್‌

ನಾವು ಈ ಘಟನೆ ಕುರಿತು ಪಾಂಡ್ಯ ಜೊತೆ ಮಾತುಕತೆ ನಡೆಸಿಲ್ಲ. ಪಾಂಡ್ಯ ಸಹೋದರ ಕೂಡ ಟಿವಿ ಶೋ ಕುರಿತು ಯಾವುದೇ ಮಾತನಾಡಿಲ್ಲ. ಈಗಾಗಲೇ ನೊಂದಿರುವ ಪಾಂಡ್ಯಗೆ ಮತ್ತಷ್ಟು ಘಾಸಿ ಮಾಡುವುದಿಲ್ಲ. ಇಷ್ಟೇ ಅಲ್ಲ ನಾವೆಲ್ಲ ಬಿಸಿಸಿಐ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ ಎಂದು ಹಿಮಾಂಶು ಹೇಳಿದ್ದಾರೆ.