ಕ್ರಿಕೆಟ್‌ನಲ್ಲಿ ಪ್ರತಿ ದಿನ ಒಂದಲ್ಲಾ ಒಂದು ದಾಖಲೆಗಳು ನಿರ್ಮಾಣವಾಗುತ್ತೆ. ಇದೀಗ ಆಸ್ಟ್ರೇಲಿಯಾದ ದೇಸಿ ತಂಡ ಅದ್ವಿತೀಯ ಸಾಧನೆ ಮಾಡಿದೆ. 50 ಓವರ್‌ಗಳಲ್ಲಿ 596 ರನ್ ಸಿಡಿಸಿ, ಎದುರಾಳಿಯನ್ನ ಕೇವಲ 25 ರನ್‌ಗೆ ಆಲೌಟ್ ಮಾಡಿ ದಾಖಲೆ ಬರೆದಿದೆ.

ಅಡಿಲೇಡ್(ಅ.16): ಆಸ್ಟ್ರೇಲಿಯಾದ ದೇಸಿ ಪಂದ್ಯಾವಳಿಯಲ್ಲಿ ಅಡಿಲೇಡ್ ಮೂಲದ ನಾರ್ದನ್ ಡಿಸ್ಟ್ರಿಕ್ಟ್ಸ್ ತಂಡ ಎಸ್‌ಎಸಿಎ ತಂಡದ ವಿರುದ್ಧ 50 ಓವರಲ್ಲಿ 3 ವಿಕೆಟ್ ನಷ್ಟಕ್ಕೆ 596 ರನ್ ಗಳಿಸಿ ದಾಖಲೆ ಬರೆದಿದೆ. ತಂಡದ ಪರ ನಾಲ್ವರು ಆಟಗಾರ್ತಿಯರು ಶತಕ ಸಿಡಿಸಿದರೆ, 75 ವೈಡ್ ಸೇರಿ ಒಟ್ಟು 88 ರನ್‌ಗಳು ಇತರೆ ರೂಪದಲ್ಲಿ ದೊರೆತವು. 

ವಿಶೇಷ ಎಂದರೆ ನಾರ್ದನ್ ತಂಡದ ಇನ್ನಿಂಗ್ಸ್‌ನಲ್ಲಿ 26 ಬೌಂಡರಿ ಹಾಗೂ ಕೇವಲ 3 ಸಿಕ್ಸರ್‌ಗಳಿದ್ದವು. ಬೃಹತ್ ಗುರಿ ಬೆನ್ನಟ್ಟಿದ ಎಸ್ಎಸಿಎ ತಂಡ 10.5 ಓವರ್‌ಗಳಲ್ಲಿ ಕೇವಲ 25 ರನ್‌ಗೆ ಆಲೌಟ್ ಆಗಿ, 571 ರನ್ ಸೋಲು ಅನುಭವಿಸಿತು. 

Scroll to load tweet…

ಆದರೆ ಇದು ವಿಶ್ವ ದಾಖಲೆಯಲ್ಲ. 2007ರಲ್ಲಿ ಶ್ರೀಲಂಕಾದ ಕಂಡ್ಯನ್ ಮಹಿಳಾ ಕ್ರಿಕೆಟ್ ತಂಡ 40 ಓವರಲ್ಲಿ 632 ರನ್ ಗಳಿಸಿ, ಎದುರಾಳಿಯನ್ನು 18ಕ್ಕೆ ಆಲೌಟ್ ಮಾಡಿ 614 ರನ್ ಜಯ ಸಾಧಿಸಿತ್ತು.