Asianet Suvarna News Asianet Suvarna News

ಚಳಿಗಾಲದ ಒಲಿಂಪಿಕ್ಸ್ ಇಂದಿನಿಂದ ಆರಂಭ

4 ವರ್ಷಗಳ ಬಳಿಕ ನಡೆಯುತ್ತಿರುವ ಮಹಾ ಕ್ರೀಡಾಕೂಟದಲ್ಲಿ 15 ಕ್ರೀಡೆಗಳ 102 ಸ್ಪರ್ಧೆಗಳು ನಡೆಯಲಿದ್ದು, 92 ದೇಶಗಳ 2952 ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ಇಕ್ವೆಡಾರ್, ಎರಿಟ್ರಿಯಾ,ಕೊಸೊವೊ, ಮಲೇಷ್ಯಾ, ನೈಜೀರಿಯಾ ಹಾಗೂ ಸಿಂಗಾಪುರ್ ದೇಶಗಳು ಪಾಲ್ಗೊಳ್ಳುತ್ತಿವೆ.

North Korea playing games with Winter Olympics

ಪೈಯೋಂಗ್ಚಂಗ್(ದ.ಕೊರಿಯಾ): 23ನೇ ಚಳಿಗಾಲದ ಒಲಿಂಪಿಕ್ಸ್‌ ಇಂದಿನಿಂದ ಆರಂಭಗೊಂಡಿದ್ದು, ಫೆ. 25ರವರೆಗೂ ನಡೆಯಲಿರುವ ಕ್ರೀಡಾಕೂಟಕ್ಕೆ ದಕ್ಷಿಣ ಕೊರಿಯಾದ ಪೈಯೋಂಗ್ಚಂಗ್ ಆತಿಥ್ಯ ವಹಿಸಲಿದೆ. ಇದೇ ಮೊದಲ ಬಾರಿಗೆ ದ.ಕೊರಿಯಾ ಆತಿಥ್ಯ ವಹಿಸುತ್ತಿದೆ.

4 ವರ್ಷಗಳ ಬಳಿಕ ನಡೆಯುತ್ತಿರುವ ಮಹಾ ಕ್ರೀಡಾಕೂಟದಲ್ಲಿ 15 ಕ್ರೀಡೆಗಳ 102 ಸ್ಪರ್ಧೆಗಳು ನಡೆಯಲಿದ್ದು, 92 ದೇಶಗಳ 2952 ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ಇಕ್ವೆಡಾರ್, ಎರಿಟ್ರಿಯಾ,ಕೊಸೊವೊ, ಮಲೇಷ್ಯಾ, ನೈಜೀರಿಯಾ ಹಾಗೂ ಸಿಂಗಾಪುರ್ ದೇಶಗಳು ಪಾಲ್ಗೊಳ್ಳುತ್ತಿವೆ.

ಭಾರತ ಪರ ಇಬ್ಬರು: ಭಾರತದಲ್ಲಿ ಚಳಿಗಾಲದ ಕ್ರೀಡೆಗಳು ಅಷ್ಟು ಜನಪ್ರಿಯವಲ್ಲ. ಆದರೂ ಒಲಿಂಪಿಕ್ಸ್‌'ನಲ್ಲಿ ಇಬ್ಬರು ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಲೂಜ್‌'ನಲ್ಲಿ ಶಿವಕೇಶವನ್ ಹಾಗೂ ಕ್ರಾಸ್ ಕಂಟ್ರಿ ಸ್ಕೀಯಿಂಗ್‌'ನಲ್ಲಿ ಜಗದೀಶ್ ಸಿಂಗ್ ಸ್ಪರ್ಧೆ ಗಿಳಿಯುತ್ತಿದ್ದಾರೆ. ಶಿವ ಕೇಶವನ್‌'ಗಿದು ಸತತ 6ನೇ ಒಲಿಂಪಿಕ್ಸ್ ಆಗಿದ್ದು, ಈ ಕ್ರೀಡಾಕೂಟದ ಬಳಿಕ ಅವರು ನಿವೃತ್ತಿ ಘೋಷಿಸುವುದಾಗಿ ಹೇಳಿದ್ದಾರೆ.

ಅಮೆರಿಕ ಅತಿಹೆಚ್ಚು ಅಂದರೆ 242 ಕ್ರೀಡಾಪಟುಗಳನ್ನು ಕಣಕ್ಕಿಳಿಸುತ್ತಿದೆ. ಸ್ವಿಟ್ಜರ್‌'ಲೆಂಡ್ (169) ಜರ್ಮನಿ (156) ಹಾಗೂ ಆತಿಥೇಯ ದ.ಕೊರಿಯಾವನ್ನು (122) ಕ್ರೀಡಾಪಟುಗಳು ಪ್ರತಿನಿಧಿಸಲಿದ್ದಾರೆ.

Follow Us:
Download App:
  • android
  • ios