ಭಾರತ ಕ್ರಿಕೆಟ್‌ ತಂಡದ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಎಂ.ಎಸ್‌.ಧೋನಿಗೆ, ಮತ್ತೊಬ್ಬ ಶ್ರೇಷ್ಠ ಮಾಜಿ ನಾಯಕ ಸೌರವ್‌ ಗಂಗೂಲಿ ಅವರ ಐಪಿಎಲ್‌ ಕನಸಿನ ತಂಡದಲ್ಲಿ ಸ್ಥಾನ ದೊರೆತ್ತಿಲ್ಲ. ಧೋನಿ ಬದಲಿಗೆ ಯುವ ಆಟಗಾರ ರಿಷಬ್‌ ಪಂತ್‌'ಗೆ ದಾದಾ ಅವಕಾಶ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.

ಮುಂಬೈ(ಎ.28): ಭಾರತ ಕ್ರಿಕೆಟ್‌ ತಂಡದ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಎಂ.ಎಸ್‌.ಧೋನಿಗೆ, ಮತ್ತೊಬ್ಬ ಶ್ರೇಷ್ಠ ಮಾಜಿ ನಾಯಕ ಸೌರವ್‌ ಗಂಗೂಲಿ ಅವರ ಐಪಿಎಲ್‌ ಕನಸಿನ ತಂಡದಲ್ಲಿ ಸ್ಥಾನ ದೊರೆತ್ತಿಲ್ಲ. ಧೋನಿ ಬದಲಿಗೆ ಯುವ ಆಟಗಾರ ರಿಷಬ್‌ ಪಂತ್‌'ಗೆ ದಾದಾ ಅವಕಾಶ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.

ಈಚೆಗಷ್ಟೇ ಟಿ-20 ಆಟಗಾರನಾಗಿ ಧೋನಿ ಅರ್ಹತೆ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದ ದಾದಾ, ‘‘ಧೋನಿ ಉತ್ತಮ ಟಿ-20 ಆಟಗಾರ ಎನ್ನುವ ನಂಬಿಕೆ ನನಗಿಲ್ಲ. ಅಂತಾರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ ಏಕೈಕ ಅರ್ಧಶತಕ ಗಳಿಸಿರುವ ಧೋನಿ ಸಾಧನೆ ಹೇಳಿಕೊಳ್ಳುವಂತಹ­ದ್ದೇನಲ್ಲ'' ಎಂದು ಅಭಿಪ್ರಾಯಪಟ್ಟಿದ್ದರು. ಗಂಗೂಲಿ ಅಭಿಪ್ರಾಯಕ್ಕೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. 

ಗಂಗೂಲಿ ಕನಸಿನ ಐಪಿಎಲ್‌ ತಂಡ ಇಂತಿದೆ: ವಿರಾಟ್‌ ಕೊಹ್ಲಿ, ಗೌತಮ್‌ ಗಂಭೀರ್‌, ಸ್ಟೀವ್‌ ಸ್ಮಿತ್‌, ಎಬಿ ಡಿವಿಲಿಯ​ರ್‍ಸ್ , ನಿತೀಶ್‌ ರಾಣಾ, ಮನೀಶ್‌ ಪಾಂಡೆ, ರಿಷಬ್‌ ಪಂತ್‌, ಸುನಿಲ್‌ ನರೇನ್‌, ಅಮಿತ್‌ ಮಿಶ್ರಾ, ಭುವನೇಶ್ವರ್‌ ಕುಮಾರ್‌, ಕ್ರಿಸ್‌ ಮೊರಿಸ್‌.