ಮೈಕಲ್ ವಾನ್ ಹೇಳಿಕೆಗೆ ರಶೀದ್ ಸಿಡಿಮಿಡಿ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 28, Jul 2018, 5:08 PM IST
No one listens to Vaughan Rashid lashes out at stupid comments
Highlights

‘ವಾನ್ ಏನು ಬೇಕಿದ್ದರೂ ಹೇಳಿಕೊಳಲಿ. ಅವರ ಮಾತನ್ನು ಎಲ್ಲರೂ ಕೇಳುತ್ತಾರೆ ಎಂದು ಭಾವಿಸಿದ್ದಾರೆ. ಆದರೆ ಯಾರೂ ಅವರ ಮಾತುಗಳಿಗೆ ಬೆಲೆ ನೀಡುವುದಿಲ್ಲ. ಅವರ ಅಭಿಪ್ರಾಯಗಳಿಗೆ ಕಿಮ್ಮತ್ತಿಲ್ಲ. ಅನಗತ್ಯವಾಗಿ ಅರ್ಥವಿಲ್ಲದ ಮಾತುಗಳನ್ನು ವಾನ್ ಆಡುತ್ತಿರುತ್ತಾರೆ’ ಎಂದು ರಶೀದ್ ಹೇಳಿದ್ದಾರೆ.

ಲಂಡನ್(ಜು.28]: ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ತಮಗೆ ಸ್ಥಾನ ಸಿಕ್ಕಿದ್ದನ್ನು ಟೀಕಿಸಿದ್ದ ಮಾಜಿ ನಾಯಕ ಮೈಕಲ್ ವಾನ್ ವಿರುದ್ಧ ಆದಿಲ್ ರಶೀದ್ ಸಿಡಿಮಿಡಿಗೊಂಡಿದ್ದಾರೆ.

ವಾನ್ ಹೇಳಿಕೆಯನ್ನು ತಾವು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದಿದ್ದಾರೆ. ನಿವೃತ್ತಿ ಹಿಂಪಡೆದು ಟೆಸ್ಟ್ ತಂಡಕ್ಕೆ ವಾಪಸಾದ ರಶೀದ್, ದೇಸಿ ಪಂದ್ಯಗಳಲ್ಲಿ ಆಡುವುದಿಲ್ಲ ಎನ್ನುವ ವಿಷಯನ್ನು ಮುಂದಿಟ್ಟುಕೊಂಡು ವಾನ್, ಟೀಕಿಸಿದ್ದರು. ‘ವಾನ್ ಏನು ಬೇಕಿದ್ದರೂ ಹೇಳಿಕೊಳಲಿ. ಅವರ ಮಾತನ್ನು ಎಲ್ಲರೂ ಕೇಳುತ್ತಾರೆ ಎಂದು ಭಾವಿಸಿದ್ದಾರೆ. ಆದರೆ ಯಾರೂ ಅವರ ಮಾತುಗಳಿಗೆ ಬೆಲೆ ನೀಡುವುದಿಲ್ಲ. ಅವರ ಅಭಿಪ್ರಾಯಗಳಿಗೆ ಕಿಮ್ಮತ್ತಿಲ್ಲ. ಅನಗತ್ಯವಾಗಿ ಅರ್ಥವಿಲ್ಲದ ಮಾತುಗಳನ್ನು ವಾನ್ ಆಡುತ್ತಿರುತ್ತಾರೆ’ ಎಂದು ರಶೀದ್ ಹೇಳಿದ್ದಾರೆ.

ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯ ಆಗಸ್ಟ್ 01ರಿಂದ ಆರಂಭವಾಗಲಿದ್ದು, ಸೀಮಿತ ಓವರ್’ಗಳ ಪಂದ್ಯದಲ್ಲಿ ಮಿಂಚಿದ್ದ ಆದಿಲ್ ರಶೀದ್ ಟೆಸ್ಟ್ ಸರಣಿಗೆ ಕಮ್’ಬ್ಯಾಕ್ ಮಾಡಿದ್ದಾರೆ.

loader