ಭಾರತ ಹೊರತುಪಡಿಸಿದಂತೆ ಬೇರೆಲ್ಲಾ ದೇಶಗಳಲ್ಲಿ ಡಬಲ್ಸ್ ಬ್ಯಾಡ್ಮಿಂಟನ್ ಆಟಗಾರರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಆದರೆ ಭಾರತದಲ್ಲಿ ಇದು ಉಲ್ಟಾ ಆಗಿದೆ ಎಂದು 2010ರ ಕಾಮನ್'ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಅಶ್ವಿನಿ ಬೇಸರ ವ್ಯಕ್ತಪಡಿಸಿದ್ದಾರೆ.

ನವದೆಹಲಿ(ಡಿ.28): ದೇಶದಲ್ಲಿ ಸಿಂಗಲ್ಸ್ ಆಟಗಾರರಿಗೆ ಸಿಗುತ್ತಿರುವ ಬೆಂಬಲ ಡಬಲ್ಸ್ ಆಟಗಾರರಿಗೆ ಲಭ್ಯವಾಗುತ್ತಿಲ್ಲ. ಡಬಲ್ಸ್ ಬಗ್ಗೆ ಮಲತಾಯಿ ಧೋರಣೆ ತೋರಲಾಗುತ್ತಿದೆ ಎಂದು ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಭಾರತದಲ್ಲಿ ಮಾತ್ರ ಡಬಲ್ಸ್ ಬಗ್ಗೆ ಹೆಚ್ಚಿನ ಗಮನ ಕೇಂದ್ರಿಕೃತವಾಗುತ್ತಿಲ್ಲ. ಸಿಂಗಲ್ಸ್ ಆಟಗಾರರು ನಿಜವಾಗಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ, ಡಬಲ್ಸ್ ವಿಭಾಗದಲ್ಲಿ ಪರಿಸ್ಥಿತಿ ವಿಭಿನ್ನವಾಗಿದೆ. ಅದಕ್ಕೆ ಸೂಕ್ತವಾದ ಬೆಂಬಲ ಲಭ್ಯವಾಗುತ್ತಿಲ್ಲ. ಇದು ಯುವಕರು ಡಬಲ್ಸ್ ಆಯ್ಕೆ ಮಾಡಿಕೊಳ್ಳಲು ಹಿಂಜರಿಯುವುದಕ್ಕೂ ಕಾರಣವಾಗಿದೆ’ ಎಂದು ಅಶ್ವಿನಿ ಹೇಳಿದ್ದಾರೆ.