ನವದೆಹಲಿ[ಮಾ.21]: ಟೀಂ ಇಂಡಿಯಾ ಕ್ರಿಕೆಟ್ ತಂಡದ ಹಾಲಿ ಕೋಚ್ ರವಿ ಶಾಸ್ತ್ರಿ ಗುತ್ತಿಗೆ 2019ರ ಏಕದಿನ ವಿಶ್ವಕಪ್’ವರೆಗೂ ಇರಲಿದ್ದು, ಆ ಬಳಿಕ ಮತ್ತೆ ಕೋಚ್ ಆಗಿ ಮುಂದುವರೆಯ ಬೇಕಿದ್ದರೆ ಶಾಸ್ತ್ರಿ ಹೊಸದಾಗಿ ಅರ್ಜಿ ಸಲ್ಲಿಸಬೇಕಿದೆ.

ಅಶ್ವಿನ್-ಕುಲ್ದೀಪ್ ಇಬ್ಬರಲ್ಲಿ ಕೋಚ್ ಶಾಸ್ತ್ರಿ ಮೊದಲ ಆಯ್ಕೆ ಯಾರು..? 

ರವಿ ಶಾಸ್ತ್ರಿ ಭಾರತ ಕ್ರಿಕೆಟ್‌ ತಂಡದ ಕೋಚ್‌ ಆಗಿ ಮುಂದುವರಿಯಲು ನೆಚ್ಚಿನ ಅಭ್ಯರ್ಥಿಯಾಗಿದ್ದಾರೆ ಎನಿಸಿದ್ದಾರೆ. ಆದರೆ ಅವರ ಗುತ್ತಿಗೆ ಅವಧಿಯನ್ನು ವಿಸ್ತರಿಸುವ ಬಗ್ಗೆ ಒಪ್ಪಂದದಲ್ಲಿ ಉಲ್ಲೇಖಿಸಲಾಗಿಲ್ಲ. ಹೀಗಾಗಿ ಕೋಚ್‌ ನೇಮಕ ಪ್ರಕ್ರಿಯೆಯನ್ನು ಬಿಸಿಸಿಐ ಹೊಸದಾಗಿ ನಡೆಸಬೇಕಿದೆ. 

ಬ್ಯಾಟಿಂಗ್ ಕ್ರಮಾಂಕ ಗುದ್ದಾಟ- ಕೋಚ್ ಶಾಸ್ತ್ರಿಗೆ ಕೊಹ್ಲಿ ಗುನ್ನ!

ಏಕದಿನ ವಿಶ್ವಕಪ್‌ ಮುಕ್ತಾಯಗೊಳ್ಳುತ್ತಿದ್ದಂತೆ ಶಾಸ್ತ್ರಿ ಹಾಗೂ ತಂಡದ ಇನ್ನಿತರ ಕೋಚ್‌ಗಳ ಗುತ್ತಿಗೆ ಅವಧಿ ಪೂರ್ಣಗೊಳ್ಳಲಿದೆ. ಬಿಸಿಸಿಐ ಕೋಚ್‌ ಹುದ್ದೆಗೆ ಹೊಸದಾಗಿ ಜಾಹೀರಾತು ನೀಡಿ, ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಸಂದರ್ಶನ ನಡೆಸಬೇಕಿದೆ. ವಿಶ್ವಕಪ್‌ ಮುಗಿದ ನಂತರ ಭಾರತ ತಂಡ ವಿಂಡೀಸ್‌ ಪ್ರವಾಸ ಕೈಗೊಳ್ಳಲಿದ್ದು, ಅದಕ್ಕೂ ಮುನ್ನ ಕೋಚ್‌ ನೇಮಕ ನಡೆಯಲಿದೆ ಎನ್ನಲಾಗಿದೆ.