ಕಳೆದ ಬಾರಿ ಆ್ಯಷಸ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಇಂಗ್ಲೆಂಡ್ ಹೀನಾಯ ಸೋಲು ಕಂಡಿತ್ತು. ಆದರೆ ಈ ಬಾರಿ ಗಮನಾರ್ಹ ಪ್ರದರ್ಶನ ತೋರಲು ಜೋ ರೂಟ್ ನೇತೃತ್ವದ ಆಂಗ್ಲರ ಪಡೆ ಸಜ್ಜಾಗಿದೆ.
ಪರ್ತ್(ನ.02): ಆ್ಯಷಸ್ ಸರಣಿಯ ವೇಳೆ ನಿಗದಿತ ಪ್ರಮಾಣದಲ್ಲಿ ಮದ್ಯ ಸೇವಿಸಲು ಇಂಗ್ಲೆಂಡ್ ತಂಡದ ಆಟಗಾರರು ನಿರ್ಧರಿಸಿದ್ದಾರೆ.
ಬೆನ್ ಸ್ಟೋಕ್ಸ್ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಇಂಗ್ಲೆಂಡ್ ಆಟಗಾರರು ಈ ತೀರ್ಮಾನಕ್ಕೆ ಬಂದಿದ್ದಾರೆ. ಬ್ರಿಸ್ಟೊಲ್'ನಲ್ಲಿ ಮದ್ಯದ ಅಮಲಿನಲ್ಲಿ ನೈಟ್'ಕ್ಲಬ್'ವೊಂದರ ಬಳಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸ್ಟೋಕ್ಸ್ ಗುರಿಯಾಗಿದ್ದು, ಪ್ರಕರಣದ ವಿಚಾರಣೆ ನಡೆಯುತ್ತಿದೆ. ಇದೇ ಕಾರಣಕ್ಕೆ ಆ್ಯಷಸ್ ಸರಣಿಯಿಂದ ಅವರನ್ನು ಕೈ ಬಿಡಲಾಗಿದೆ.
ಈ ಘಟನೆಯಿಂದ ಎಚ್ಚೆತ್ತಿರುವ ಇಂಗ್ಲೆಂಡ್ ತಂಡದ ಆಟಗಾರರು ಈ ರೀತಿ ಘಟನೆಗಳು ಪುನಾರವರ್ತನೆ ಆಗದಂತೆ ಎಚ್ಚರ ವಹಿಸಲು ನಿರ್ಧರಿಸಿದ್ದು, ಆಸ್ಟ್ರೇಲಿಯಾ ಪ್ರವಾಸದ ವೇಳೆ ಆದಷ್ಟು ಕಡಿಮೆ ಪ್ರಮಾಣದಲ್ಲಿ ಮದ್ಯ ಸೇವಿಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಕಳೆದ ಬಾರಿ ಆ್ಯಷಸ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಇಂಗ್ಲೆಂಡ್ ಹೀನಾಯ ಸೋಲು ಕಂಡಿತ್ತು. ಆದರೆ ಈ ಬಾರಿ ಗಮನಾರ್ಹ ಪ್ರದರ್ಶನ ತೋರಲು ಜೋ ರೂಟ್ ನೇತೃತ್ವದ ಆಂಗ್ಲರ ಪಡೆ ಸಜ್ಜಾಗಿದೆ.