ಆರ್'ಸಿಬಿ ಔಟಾದ ನಂತರ ಕೊಹ್ಲಿಗೆ ಮತ್ತೊಂದು ನಿರಾಸೆ

First Published 24, May 2018, 6:29 PM IST
No county action for injured Virat Kohli fitness test on June 15
Highlights

ಅವರಿಗೆ ಮಾಮೂಲಿನ ಸ್ಥಿತಿಗೆ ಮರಳಲು 3 ವಾರಗಳ ವಿಶ್ರಾಂತಿ ಅಗತ್ಯವಿದ್ದು ಇಂಗ್ಲೆಂಡ್ ಕೌಂಟಿ ಸರ್ರೆ ತಂಡದಲ್ಲಿ ಈ ಬಾರಿ ಆಡುವುದು ಬಹುತೇಕ ಅನುಮಾನವಾಗಿದೆ.

ಮುಂಬೈ[ಮೇ.24]: ಆರ್'ಸಿಬಿ ಪ್ಲೇಆಫ್ ಹಂತ ತಲುಪದೆ ನಿರಾಸೆ ಅನುಭವಿಸಿರುವ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ಆಘಾತ ಎದುರಾಗಿದೆ.
ತಾವು ಬಹುನಿರೀಕ್ಷಿತವಾಗಿ ಆಡಬೇಕೆಂದು ಕೊಂಡಿದ್ದ ಇಂಗ್ಲೆಂಡ್ ಕೌಂಟಿಗೆ ಗಾಯದ ಸಮಸ್ಯೆಯಿಂದ ಹೊರಗುಳಿಯುವಂತಾಗಿದೆ. ಕುತ್ತಿಗೆ ನೋವಿನಿಂದ ಬಳಲುತ್ತಿರುವ ಅವರಿಗೆ ಮಾಮೂಲಿನ ಸ್ಥಿತಿಗೆ ಮರಳಲು 3 ವಾರಗಳ ವಿಶ್ರಾಂತಿ ಅಗತ್ಯವಿದ್ದು ಇಂಗ್ಲೆಂಡ್ ಕೌಂಟಿ ಸರ್ರೆ ತಂಡದಲ್ಲಿ ಈ ಬಾರಿ ಆಡುವುದು ಬಹುತೇಕ ಅನುಮಾನವಾಗಿದೆ.
ಬಿಸಿಸಿಐ ಸ್ವತಃ ಅಧಿಕೃತ ಪ್ರಕಟಣೆ ತಿಳಿಸಿದ್ದು ಬೆಂಗಳೂರಿನಲ್ಲಿ ಮೇ.15ರಂದು ನಡೆಯುವ ಫೆಟ್'ನೆಸ್ ಪರೀಕ್ಷೆಯಲ್ಲಿ  ಗುಣಮುಖರಾಗಿರುವುದರ ಬಗ್ಗೆ ಮಾಹಿತಿ ನೀಡಿಲಿದೆ. ಬೆಂಗಳೂರಿನಲ್ಲಿ ಜೂ.14ರಂದು ಅಫ್ಘಾನ್ ವಿರುದ್ಧ ಏಕೈಕ ಟೆಸ್ಟ್ ಪಂದ್ಯ ನಡೆಯಲಿದೆ. ನಿನ್ನೆಯಷ್ಟೆ ಆರ್'ಸಿಬಿಯ ಸ್ಫೋಟಕ ಆಟಗಾರ ಎಬಿಡಿ ವಿಲಿಯರ್ಸ್ ಅಂತರಾಷ್ಟ್ರೀಯ ಕ್ರಿಕೆಟ್'ನಿಂದ ನಿವೃತ್ತಿ ಪ್ರಕಟಿಸಿದರು. 

    

loader