Asianet Suvarna News Asianet Suvarna News

ಪ್ಯಾರಿಸ್ ಒಲಿಂಪಿಕ್ಸ್'ನಲ್ಲಿ ವೇಟ್ ಲಿಫ್ಟಿಂಗ್ ಡೌಟು: ಕರ್ಣಂ ಮಲ್ಲೇಶ್ವರಿ 2000ರ ಒಲಿಂಪಿಕ್'ನಲ್ಲಿ ಕಂಚು ಗೆದ್ದಿದ್ದರು

ಇದೀಗ ವೇಟ್‌ಲಿಫ್ಟಿಂಗ್ ಫೆಡರೇಷನ್ ನೀಡುವ ವರದಿ ಆಧಾರದ ಮೇಲೆ 2024ರಲ್ಲಿ ವೇಟ್‌ಲಿಫ್ಟಿಂಗ್‌ಗೆ ಸ್ಥಾನ ನಿರ್ಧಾರವಾಗಲಿದೆ.

No Changes in Core Olympic Sports for Paris 2024

ಲಂಡನ್(ಸೆ.17): ವೇಟ್‌ಲಿಫ್ಟಿಂಗ್‌ಗೆ ಅಂಟಿಕೊಂಡಿರುವ ಡೋಪಿಂಗ್ ವಿವಾದವನ್ನು ಕಳೆಯಲು ಸಾಕಷ್ಟು ಹಂತಗಳನ್ನು ದಾಟಬೇಕಾಗಿದ್ದು, 2024ರಲ್ಲಿ ಪ್ಯಾರೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ವೇಟ್ ಲಿಫ್ಟಿಂಗ್‌ಗೆ ಸ್ಥಾನ ಲಭ್ಯವಾಗುವುದು ಕಷ್ಟ ಸಾಧ್ಯ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ತಿಳಿಸಿದೆ.

ಡೋಪಿಂಗ್ ತಡೆಗಟ್ಟಲು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದರ ಕುರಿತು ಡಿಸೆಂಬರ್ ಒಳಗೆ ವರದಿ ನೀಡುವಂತೆ ಅಂತಾರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಫೆಡರೇಷನ್‌ಗೆ ಐಒಸಿ ಜುಲೈನಲ್ಲಿ ತಿಳಿಸಿತ್ತು. ಇದೀಗ ವೇಟ್‌ಲಿಫ್ಟಿಂಗ್ ಫೆಡರೇಷನ್ ನೀಡುವ ವರದಿ ಆಧಾರದ ಮೇಲೆ 2024ರಲ್ಲಿ ವೇಟ್‌ಲಿಫ್ಟಿಂಗ್‌ಗೆ ಸ್ಥಾನ ನಿರ್ಧಾರವಾಗಲಿದೆ. ಭಾರತದ ಮಹಿಳಾ ವೇಟ್ ಲಿಫ್ಟ್'ರ್ ಕರ್ಣಂ ಮಲ್ಲೇಶ್ವರಿ 2000ರ ಸಿಡ್ನಿ ಒಲಿಂಪಿಕ್ಸ್'ನಲ್ಲಿ ಕಂಚಿನ ಪದಕ ಗೆದ್ದಿದ್ದರು.

Follow Us:
Download App:
  • android
  • ios