ಮೂರನೇ ಟೆಸ್ಟ್'ಗೂ ಮುನ್ನ ವಿರಾಟ್ ಕೊಹ್ಲಿ ಕೂಡಾ ಸಾಹ ಅವರನ್ನು ಭಾರತ ತಂಡದ ನಂ.1 ಟೆಸ್ಟ್ ಕೀಪರ್ ಎಂದು ಕೊಂಡಾಡಿದ್ದರು.
ನವದೆಹಲಿ(ಆ.16): ವೃದ್ದಿಮಾನ್ ಸಾಹ ಭಾರತ ತಂಡದ ಪ್ರತಿಭಾನ್ವಿತ ಆಟಗಾರ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಸಾಹ ವಿಶ್ವದ ನಂ.1 ವಿಕೆಟ್ ಕೀಪರ್ ಆಗಿ ಬೆಳೆದುಬಿಟ್ಟಿದ್ದಾರಾ..? ಹೀಗೆ ಹೇಳಿದ್ದು ನಾವಲ್ಲ, ಟೀಂ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ..!
ಹೌದು ಇತ್ತೀಚೆಗಷ್ಟೇ ಲಂಕಾ ಸರಣಿಯನ್ನು ಕ್ಲೀನ್'ಸ್ವೀಪ್ ಮಾಡಿ ಜೋಶ್'ನಲ್ಲಿರುವ ಟೀಂ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ, ತಂಡದ ಪ್ರದರ್ಶನದ ಮತ್ತೆ ಖಾಸಗಿ ಸುದ್ದಿವಾಹಿನಿಯೊಡನೆ ಮಾತನಾಡುತ್ತಾ, ಸಾಹ ವಿಕೆಟ್ ಕೀಪಿಂಗ್, ಬ್ಯಾಟಿಂಗ್ ಹಾಗೂ ಕ್ಯಾಚಿಂಗ್'ನಲ್ಲಿ ಅದ್ಭುತವಾಗಿ ಪ್ರದರ್ಶನ ತೋರುತ್ತಿದ್ದಾರೆ. ದೇಸಿ ಕ್ರಿಕೆಟ್'ನಲ್ಲಿ ಸಾಕಷ್ಟು ವರ್ಷ ಪಳಗಿರುವ ಸಾಹ ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿದ್ದಾರೆ. ನೆನಪಿಡಿ ಸಾಹ ಧೋನಿಯ ಪಡಿಯಚ್ಚಿನಂತೆ ಬೆಳೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಲಂಕಾ ಸರಣಿಯಲ್ಲೂ ಅದ್ಭುತವಾಗಿ ವಿಕೆಟ್ ಕೀಪಿಂಗ್ ಪ್ರದರ್ಶನ ತೋರಿರುವ ಸಾಹ, ಪ್ರಸ್ತುತ ವಿಶ್ವ ಕ್ರಿಕೆಟ್'ನ ನಂ.1 ವಿಕೆಟ್ ಕೀಪರ್ ಎಂದು ಗುಣಗಾನ ಮಾಡಿದ್ದಾರೆ. ಧೋನಿಯನ್ನು
ಮೂರನೇ ಟೆಸ್ಟ್'ಗೂ ಮುನ್ನ ವಿರಾಟ್ ಕೊಹ್ಲಿ ಕೂಡಾ ಸಾಹ ಅವರನ್ನು ಭಾರತ ತಂಡದ ನಂ.1 ಟೆಸ್ಟ್ ಕೀಪರ್ ಎಂದು ಕೊಂಡಾಡಿದ್ದರು.
