ಬಹುಕಾಲದ ಗೆಳತಿ ಜೊತೆ ಕ್ರಿಕೆಟಿಗ ನಿತೀಶ್ ರಾಣಾ ನಿಶ್ಚಿತಾರ್ಥ

Nitish Rana gets engaged to his girlfriend Saachi Marwah
Highlights

ಐಪಿಎಲ್ ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಅದ್ಬುತ ಬ್ಯಾಟಿಂಗ್ ಪ್ರದರ್ಶನ ನೀಡಿರುವ ದೆಹಲಿ ಮೂಲದ ಬ್ಯಾಟ್ಸ್‌ಮನ್ ನಿತೀಶ್ ರಾಣ ಸದ್ದಿಲ್ಲದೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಹಾಗಾದೆರೆ ರಾಣ ಮನಸ್ಸು ಕದ್ದು ಹುಡುಗಿ ಯಾರು?

ದೆಹಲಿ(ಜೂನ್.11): ಟೀಮ್ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ಬ್ಯೂಟಿ ಅನುಷ್ಕಾ ಶರ್ಮಾ ನಡುವಿನ ಮದುವೆ ಬಳಿಕ,ಇದೀಗ ಭಾರತದಲ್ಲಿ ಕ್ರಿಕೆಟಿಗರ ಮದುವೆ ಪರ್ವ ಆರಂಭಗೊಂಡಿದೆ. ಇತ್ತೀಚೆಗೆ ಕರ್ನಾಟಕ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಮದುವೆಯಾದರೆ, ಪಂಜಾಬ್ ವೇಗಿ ಸಂದೀಪ್ ಶರ್ಮಾ ಎಂಗೇಜ್‌ಮೆಂಟ್ ಮುಗಿಸಿದ್ದಾರೆ. ಇದೀಗ ದೆಹಲಿ ಕ್ರಿಕೆಟಿಗ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ಯಾಟ್ಸ್‌ಮನ್ ನಿತೀಶ್ ರಾಣ ಸರದಿ.

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತ್ತಾ ಪರ ಅದ್ಬುತ ಪ್ರದರ್ಶನ ನೀಡಿದ ನಿತೀಶ್ ರಾಣ, ಇದೀಗ ತಮ್ಮ ಬಹುಕಾಲದ ಗೆಳತಿ ಸಾಚಿ ಮರ್ವಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿತೀಶ್ ರಾಣ ದೆಹಲಿ ಟೀಮ್‌ಮೇಟ್ ಧ್ರುವ ಶೋರೆ ಸಾಮಾಜಿಕ ಜಾಲತಾಣದಲ್ಲಿ ನೀತೀಶ್ ರಾಣ ಎಂಗೇಜ್‌ಮೆಂಟ್ ವಿಚಾರ ಬಹಿರಂಗ ಪಡಿಸಿದ್ದಾರೆ.

ಸಾಚಿ ಮರ್ವಾ ದೆಹಲಿಯಲ್ಲಿ ಇಂಟಿರಿಯರ್ ಆರ್ಕಿಟೆಕ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಬಹುಕಾಲದ ಗೆಳತಿ ಜೊತೆ ಸದ್ದಿಲ್ಲದೇ ಎಂಗೇಜ್‌ಮೆಂಟ್ ಮುಗಿಸಿರುವ ರಾಣ, ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. 

loader