Asianet Suvarna News Asianet Suvarna News

ಟೆಸ್ಟ್, ಒನ್'ಡೇ ಲೀಗ್'ಗೆ ಐಸಿಸಿ ಗ್ರೀನ್ ಸಿಗ್ನಲ್; ಇನ್ಮುಂದೆ ಹೊಸ ನಮೂನೆಯಲ್ಲಿ ಕ್ರಿಕೆಟ್ ಲೀಗ್..!

2020ರಲ್ಲಿ ಏಕದಿನ ಚಾಂಪಿಯನ್ ಆರಂಭಗೊಳ್ಳಲಿದ್ದು, 13 ತಂಡಗಳು ಭಾಗವಹಿಸಲಿವೆ. ಟೆಸ್ಟ್ ಆಡುವ ಎಲ್ಲಾ 12 ರಾಷ್ಟ್ರಗಳು ಹಾಗೂ ಹಾಲಿ ವಿಶ್ವ ಕ್ರಿಕೆಟ್ ಲೀಗ್ ಲೀಗ್ ಚಾಂಪಿಯನ್ ತಂಡ ಈ ಪಂದ್ಯಾವಳಿಯಲ್ಲಿ ಕಣಕ್ಕಿಳಿಯಲಿದೆ.

Nine nation Test championship one day international league get the ICC nod

ಆಕ್ಲೆಂಡ್(ಅ.14): 9 ತಂಡಗಳ ಟೆಸ್ಟ್ ಹಾಗೂ 13 ತಂಡಗಳ ಏಕದಿನ ಚಾಂಪಿಯನ್‌'ಶಿಪ್ ಲೀಗ್‌'ಗೆ ಐಸಿಸಿ ಹಸಿರು ನಿಶಾನೆ ತೋರಿದೆ. 2019ರಲ್ಲಿ ಟೆಸ್ಟ್ ಹಾಗೂ 2020ರಲ್ಲಿ ಏಕದಿನ ಲೀಗ್‌'ಗೆ ಚಾಲನೆ ದೊರೆಯಲಿದೆ. ಐಸಿಸಿಯ ಸದಸ್ಯ ರಾಷ್ಟ್ರಗಳೊಂದಿಗೆ ಇಲ್ಲಿ ಸಭೆ ನಡೆಸಿದ ಬಳಿಕ ಐಸಿಸಿ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ.

ಟೆಸ್ಟ್ ಲೀಗ್: ಅಗ್ರ 9 ಟೆಸ್ಟ್ ತಂಡಗಳು ಐಸಿಸಿ ಟೆಸ್ಟ್ ಚಾಂಪಿಯನ್‌'ಶಿಪ್‌'ನಲ್ಲಿ ಸ್ಪರ್ಧಿಸಲಿವೆ. 2 ವರ್ಷಗಳ ಅವಧಿಯಲ್ಲಿ ಪ್ರತಿ ತಂಡ ಒಟ್ಟು 6 ಸರಣಿಗಳನ್ನು ಆಡಲಿದ್ದು, ತವರಿನಲ್ಲಿ 3, ತವರಿನಾಚೆ 3 ಸರಣಿಗಳು ನಡೆಯಲಿವೆ. ಪ್ರತಿ ಸರಣಿ ಕನಿಷ್ಠ 2ರಿಂದ ಗರಿಷ್ಠ 5 ಟೆಸ್ಟ್‌'ಗಳನ್ನು ಹೊಂದಿರಲಿದೆ. ಎಲ್ಲಾ ಪಂದ್ಯಗಳು 5 ದಿನಗಳ ಪಂದ್ಯಗಳಾಗಿರುತ್ತದೆ. 2021ರಲ್ಲಿ ಫೈನಲ್ ನಡೆಯಲಿದ್ದು, ಅಂಕ ಪಟ್ಟಿಯಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಫೈನಲ್ ಎಲ್ಲಿ ನಡೆಸಬೇಕು ಎನ್ನುವುದನ್ನು ಐಸಿಸಿ ಇನ್ನೂ ನಿರ್ಧರಿಸಿಲ್ಲ.

ಏಕದಿನ ಲೀಗ್: 2020ರಲ್ಲಿ ಏಕದಿನ ಚಾಂಪಿಯನ್ ಆರಂಭಗೊಳ್ಳಲಿದ್ದು, 13 ತಂಡಗಳು ಭಾಗವಹಿಸಲಿವೆ. ಟೆಸ್ಟ್ ಆಡುವ ಎಲ್ಲಾ 12 ರಾಷ್ಟ್ರಗಳು ಹಾಗೂ ಹಾಲಿ ವಿಶ್ವ ಕ್ರಿಕೆಟ್ ಲೀಗ್ ಲೀಗ್ ಚಾಂಪಿಯನ್ ತಂಡ ಈ ಪಂದ್ಯಾವಳಿಯಲ್ಲಿ ಕಣಕ್ಕಿಳಿಯಲಿದೆ. ಪ್ರತಿ ತಂಡ 3 ಪಂದ್ಯಗಳ ಒಟ್ಟು 8 ಸರಣಿಗಳನ್ನು ಆಡಲಿದೆ. ತವರಿನಲ್ಲಿ 4 ಹಾಗೂ ತವರಿನಾಚೆ 4 ಸರಣಿಗಳನ್ನು ತಂಡಗಳು ಆಡಲಿವೆ. ಭಾರತದಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌'ಗೆ ನೇರ ಪ್ರವೇಶ ಪಡೆಯಲು ಈ ಚಾಂಪಿಯನ್‌'ಶಿಪ್ ಸಹಕಾರಿಯಾಗಲಿದೆ.

Follow Us:
Download App:
  • android
  • ios