ನೂತನ ಜೆರ್ಸಿಯಲ್ಲಿ ಸಾಕಷ್ಟು ಉತ್ತಮ ಗುಣಗಳಿರುವುದಾಗಿ ನೈಕ್ ಕಂಪೆನಿ ಹೇಳಿದೆ. ಜೆರ್ಸಿ ತೊಟ್ಟ ಆಟಗಾರ ಯಾವ ಕಡೆ ಬಾಗಿದರೂ ಫ್ಲೆಕ್ಸಿಬಲ್ ಆಗಿರುವಂತೆ ರೂಪಿಸಲಾಗಿದೆಯಂತೆ.

ನವದೆಹಲಿ(ಜ.12): ಭಾರತ ಕ್ರಿಕೆಟ್ ತಂಡದ ಜೆರ್ಸಿ ಪ್ರಾಯೋಜಕತ್ವ ವಹಿಸಿಕೊಂಡಿರುವ ನೈಕ್, ಮುಂಬರುವ ಇಂಗ್ಲೆಂಡ್ ಏಕದಿನ ಸರಣಿಯಿಂದ ಭಾರತ ತಂಡದ ಆಟಗಾರರಿಗೆ ನೂತನ ಜೆರ್ಸಿ ನೀಡಿದೆ.

ಭಾರತ ಕ್ರಿಕೆಟ್ ತಂಡದ ಆಟಗಾರರಾದ ವಿರಾಟ್ ಕೊಹ್ಲಿ, ಎಂ.ಎಸ್ ಧೋನಿ, ಅಜಿಂಕ್ಯ ರಹಾನೆ, ಆರ್. ಅಶ್ವಿನ್ ಮತ್ತು ಮಹಿಳಾ ಆಟಗಾರ್ತಿಯರಾದ ಮಿಥಾಲಿ ರಾಜ್, ಹರ್ಮನ್ ಪ್ರೀತ್ ಕೌರ್ ಇಂದು ಜೆರ್ಸಿ ಅನಾವರಣಗೊಳಿಸಿದರು.

ನೂತನ ಜೆರ್ಸಿಯಲ್ಲಿ ಸಾಕಷ್ಟು ಉತ್ತಮ ಗುಣಗಳಿರುವುದಾಗಿ ನೈಕ್ ಕಂಪೆನಿ ಹೇಳಿದೆ. ಜೆರ್ಸಿ ತೊಟ್ಟ ಆಟಗಾರ ಯಾವ ಕಡೆ ಬಾಗಿದರೂ ಫ್ಲೆಕ್ಸಿಬಲ್ ಆಗಿರುವಂತೆ ರೂಪಿಸಲಾಗಿದೆಯಂತೆ. ಹವಾಮಾನಕ್ಕೆ ತಕ್ಕ ಹಾಗೆ ಆಟಗಾರನಿಗೆ ರಕ್ಷಣೆ ಒದಗಿಸಲಿದೆ ಎಂದು ಕಂಪೆನಿ ತಿಳಿಸಿದೆ