ಸೋಲಿನ ಡವಡೆಗೆ ಜಾರುವಂತೆ ಮಾಡಿದ್ದ ವಿಜಯ್ ಶಂಕರ್ ಆ ಕ್ಷಣವನ್ನು ನೆನಪಿಸಿಕೊಂಡಿದ್ದು ಹೀಗೆ..

Nidahas Trophy Vijay Shankar Still Disappointed After Failure in Final
Highlights

ನಿದಾಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ವಿಜಯ್ ಶಂಕರ್ ವಿಜಯ್ ಶಂಕರ್ 19 ಎಸೆತಗಳಲ್ಲಿ 17 ರನ್ ಬಾರಿಸಿ ಕೇವಲ ಒಂದು ಎಸೆತವಿದ್ದಾಗ ಔಟ್ ಆಗಿದ್ದರು. ಮರು ಎಸೆತದಲ್ಲಿ ಟೀಂ ಇಂಡಿಯಾ ಗೆಲ್ಲಲು 5 ರನ್ ಅವಶ್ಯಕತೆಯಿದ್ದಾಗ ದಿನೇಶ್ ಕಾರ್ತಿಕ್ ಸಿಕ್ಸರ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.

ಚೆನ್ನೈ(ಮಾ.22): ತ್ರಿಕೋನ ಟಿ20 ಸರಣಿ ಫೈನಲ್ ಮುಕ್ತಾಯಗೊಂಡು 4 ದಿನಗಳು ಕಳೆದರೂ, ತಂಡವನ್ನು ಸೋಲಿನ ಸುಳಿಗೆ ತಳ್ಳಿದ್ದ ಸನ್ನಿವೇಶವನ್ನೂ ಇನ್ನೂ ತಮ್ಮಿಂದ ಮರೆಯಲು ಸಾಧ್ಯವಾಗುತ್ತಿಲ್ಲ ಎಂದು ವಿಜಯ್ ಶಂಕರ್ ಹೇಳಿದ್ದಾರೆ.

‘ಕಾರ್ತಿಕ್ ಕೊನೆ ಬಾಲ್ ಸಿಕ್ಸರ್ ಬಾರಿಸದಿದ್ದರೆ ನನ್ನ ಗತಿ ಏನಾಗುತಿತ್ತು ಎಂದು ಈಗಲೂ ಯೋಚಿಸುತ್ತೇನೆ. ಪಂದ್ಯವನ್ನು ನಾವು ಸುಲಭವಾಗಿ ಗೆಲ್ಲಬಹುದಿತ್ತು. ಆದರೆ ನಾನು ಮಾಡಿದ ತಪ್ಪಿನಿಂದ ಕೊನೆ ಎಸೆತದ ವರೆಗೂ ಹೋರಾಡ ಬೇಕಾಯಿತು. ಪಂದ್ಯ ಮುಕ್ತಾಯಗೊಂಡ ಬಳಿಕ ಹೋಟೆಲ್‌'ನಲ್ಲಿ ನನ್ನ ರೂಂಗೆ ಭೇಟಿ ನೀಡಿದ ಕಾರ್ತಿಕ್, ಸಮಾಧಾನಪಡಿಸಿ ಧೈರ್ಯ ತುಂಬಿದರು. ತಂಡಕ್ಕಾಗಿ ಪಂದ್ಯ ಗೆಲ್ಲುವವರೆಗೂ ನನಗೆ ಸಮಾಧಾನವಿಲ್ಲ’ ಎಂದು ಶಂಕರ್ ಹೇಳಿದ್ದಾರೆ.

loader