ನಿದಾಸ್ ಟ್ರೋಫಿ: ಇಂಡೋ-ಬಾಂಗ್ಲಾ ಫೈನಲ್ ಫೈಟ್'ಗೆ ಕ್ಷಣಗಣನೆ

sports | Sunday, March 18th, 2018
Suvarna Web Desk
Highlights

ಮತ್ತೊಂದೆಡೆ ಆತಿಥೇಯ ಶ್ರೀಲಂಕಾವನ್ನು 2 ಪಂದ್ಯಗಳಲ್ಲಿ ಬಗ್ಗು ಬಡಿದು ಫೈನಲ್‌'ಗೇರಿರುವ ಬಾಂಗ್ಲಾ ಸಹ ಉತ್ಸಾಹದ ಅಲೆಯಲ್ಲಿ ತೇಲುತ್ತಿದ್ದು, ಭಾರತಕ್ಕೆ ಶಾಕ್ ನೀಡುವ ಲೆಕ್ಕಾಚಾರದಲ್ಲಿದೆ. ಎರಡು ತಂಡಗಳಿಗೆ ಹೋಲಿಕೆ ಮಾಡಿದರೆ ಭಾರತವೇ ನೆಚ್ಚಿನ ತಂಡವಾಗಿದೆ.

ಕೊಲಂಬೊ(ಮಾ.18): ಹ್ಯಾಟ್ರಿಕ್ ಗೆಲುವಿನೊಂದಿಗೆ ತ್ರಿಕೋನ ಟಿ20 ಸರಣಿಯ ಫೈನಲ್‌'ಗೇರಿರುವ ಭಾರತ, ನಡೆಯಲಿರುವ ಫೈನಲ್ ಹಣಾಹಣಿಯಲ್ಲಿ ಪ್ರಶಸ್ತಿಗಾಗಿ ಬಾಂಗ್ಲಾದೇಶದ ವಿರುದ್ಧ ಸೆಣಸಲಿದೆ. ಲೀಗ್ ಹಂತದ ಎರಡೂ ಪಂದ್ಯಗಳಲ್ಲೂ ಬಾಂಗ್ಲನ್ನರ ವಿರುದ್ಧ ನಿರಾಯಾಸವಾಗಿ ಜಯಿಸಿರುವ ರೋಹಿತ್ ಶರ್ಮಾ ಪಡೆ ಫೈನಲ್‌'ನಲ್ಲೂ ಇದೇ ಪ್ರದರ್ಶನ ಮುಂದುವರಿಸುವ ವಿಶ್ವಾಸದಲ್ಲಿದೆ.

ಮತ್ತೊಂದೆಡೆ ಆತಿಥೇಯ ಶ್ರೀಲಂಕಾವನ್ನು 2 ಪಂದ್ಯಗಳಲ್ಲಿ ಬಗ್ಗು ಬಡಿದು ಫೈನಲ್‌'ಗೇರಿರುವ ಬಾಂಗ್ಲಾ ಸಹ ಉತ್ಸಾಹದ ಅಲೆಯಲ್ಲಿ ತೇಲುತ್ತಿದ್ದು, ಭಾರತಕ್ಕೆ ಶಾಕ್ ನೀಡುವ ಲೆಕ್ಕಾಚಾರದಲ್ಲಿದೆ. ಎರಡು ತಂಡಗಳಿಗೆ ಹೋಲಿಕೆ ಮಾಡಿದರೆ ಭಾರತವೇ ನೆಚ್ಚಿನ ತಂಡವಾಗಿದೆ.

ಫಾರ್ಮ್‌'ಗೆ ಮರಳಿದ ರೋಹಿತ್: ರೋಹಿತ್ ಶರ್ಮಾ ಲಯಕ್ಕೆ ಮರಳಿದ್ದು, ಭಾರತ ತಂಡದ ಹುಮ್ಮಸ್ಸನ್ನು ದುಪ್ಪಟ್ಟುಗೊಳಿಸಿದೆ. ಲೀಗ್ ಹಂತದ ಕೊನೆ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ 89 ರನ್ ಸಿಡಿಸುವ ಮೂಲಕ ಶರ್ಮಾ ಎದುರಾಳಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಸುರೇಶ್ ರೈನಾ, ಮನೀಶ್ ಪಾಂಡೆ, ದಿನೇಶ್ ಕಾರ್ತಿಕ್ ಮಧ್ಯಮ ಕ್ರಮಾಂಕ ಬಲ ಎನಿಸಿದ್ದಾರೆ.

ಬೌಲರ್‌'ಗಳ ಮೇಲೆ ಹೆಚ್ಚಿನ ಜವಾಬ್ದಾರಿ: ಬ್ಯಾಟ್ಸ್'ಮನ್‌'ಗಳಿಗಿಂತ ಭಾರತೀಯ ಬೌಲರ್‌ಗಳಿಗೆ ಈ ಪಂದ್ಯ ಸವಾಲಾಗಿ ಪರಿಣಮಿಸಿದರೂ ಅಚ್ಚರಿಯಿಲ್ಲ. ಏಕೆಂದರೆ ಬಾಂಗ್ಲಾ ಬ್ಯಾಟ್ಸ್‌ಮನ್‌ಗಳು ಯಾವುದೇ ಹಂತದಲ್ಲಿ ಬೇಕಿದ್ದರೂ ಸಿಡಿದೇಳುವ ಸಾಮರ್ಥ್ಯ ಹೊಂದಿದ್ದಾರೆ. ಲಂಕಾ ವಿರುದ್ಧದ 2 ಪಂದ್ಯಗಳಲ್ಲೂ ಇದನ್ನು ಸಾಬೀತು ಪಡಿಸಿದ್ದರೆ. ಮೊದಲ ಪಂದ್ಯದಲ್ಲಿ

ದಾಖಲೆಯ 215 ರನ್ ಬೆನ್ನಟ್ಟಿದ ಬಾಂಗ್ಲಾ, ಲೀಗ್ ಹಂತದ ನಿರ್ಣಾಯಕ ಪಂದ್ಯದಲ್ಲಿ ಇನ್ನೊಂದು ಎಸೆತ ಬಾಕಿ ಇರುವಂತೆ ಸಿಂಹಳೀಯರ ಬೇಟೆಯಾಡಿ ಫೈನಲ್ ಪ್ರವೇಶಿಸಿದ್ದಾರೆ. ಶಕೀಬ್ ಅಲ್ ಹಸನ್, ತಮೀಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಲಿಟನ್ ದಾಸ್, ಮುಷ್ಫಿಕರ್ ರಹೀಮ್, ಮಹಮುದ್ದುಲ್ಲಾ, ಸಬ್ಬೀರ್ ರಹಮಾನ್‌'ರಂತಹ ಟಿ20 ತಜ್ಞರು ಬಾಂಗ್ಲಾ ಪಡೆಯಲ್ಲಿದ್ದಾರೆ. ಉನಾದ್ಕತ್, ಸಿರಾಜ್ ದುಬಾರಿ ಆಗುತ್ತಿರುವ ಕಾರಣ ಶಾರ್ದೂಲ್ ಠಾಕೂರ್ ಮೇಲೆ ಹೆಚ್ಚಿನ ಒತ್ತಡವಿದೆ. ಸ್ಪಿನ್ನರ್‌'ಗಳಾದ ಚಹಲ್ ಹಾಗೂ ವಾಷಿಂಗ್ಟನ್ ಸುಂದರ್, ಎದುರಾಳಿ ಬ್ಯಾಟ್ಸ್‌'ಮನ್'ಗಳ ರನ್ ವೇಗಕ್ಕೆ ಕಡಿವಾಣ ಹಾಕುವಲ್ಲಿ ಸಫಲರಾಗಿದ್ದಾರೆ. ಅದರಲ್ಲೂ ಪವರ್ ಪ್ಲೇನಲ್ಲಿ ಯಶಸ್ಸು ಕಾಣುತ್ತಿರುವುದು ಭಾರತಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಹೆಚ್ಚುವರಿ ಸ್ಪಿನ್ನರ್ ಆಗಿ ಅಕ್ಷರ್ ಪಟೇಲ್ ಅಥವಾ ದೀಪಕ್ ಹೂಡಾರನ್ನು ಕಣಕ್ಕಿಳಿಸಿದರೂ ಅಚ್ಚರಿಯಿಲ್ಲ

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Suvarna Web Desk