ಟೀಂ ಇಂಡಿಯಾಗೆ ಸವಾಲಿನ ಗುರಿ ನೀಡಿದ ಬಾಂಗ್ಲಾದೇಶ

First Published 18, Mar 2018, 9:00 PM IST
Nidahas Trophy Final Bangladesh set 167 run target for India
Highlights

ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ದಿಟ್ಟ ಬ್ಯಾಟಿಂಗ್ ನಡೆಸಿದ ಶಬ್ಬೀರ್ ಕೇವಲ 50 ಎಸೆತಗಳಲ್ಲಿ 77 ರನ್ ಸಿಡಿಸಿ ಉನಾದ್ಕತ್'ಗೆ ವಿಕೆಟ್ ಒಪ್ಪಿಸಿದರು. ಇದಾದ ಬೆನ್ನಲ್ಲೇ ನಿರಂತರ ವಿಕೆಟ್ ಕಳೆದುಕೊಂಡ ಬಾಂಗ್ಲಾ ಅಂತಿಮವಾಗಿ 166 ರನ್'ಗಳಿಸಿತು.

ಕೊಲಂಬೊ(ಮಾ.18): ಟೀಂ ಇಂಡಿಯಾ ನಿದಾಸ್ ಟ್ರೋಫಿ ಗೆಲ್ಲಲು 167 ರನ್'ಗಳ ಸವಾಲಿನ ಗುರಿ ನೀಡಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಬಾಂಗ್ಲಾದೇಶ ಆರಂಭದಲ್ಲೇ ಸ್ಫೋಟಕ ಬ್ಯಾಟಿಂಗ್'ಗೆ ಮುಂದಾಯಿತು. 3.1 ಓವರ್'ನಲ್ಲಿ ಬಾಂಗ್ಲಾ ಆರಂಭಿಕರು 27 ರನ್ ಕಲೆಹಾಕಿದ್ದರು. ಲಿಟನ್ ದಾಸ್(11) ವಾಷಿಂಗಟನ್ ಸುಂದರ್ ಬೌಲಿಂಗ್'ನಲ್ಲಿ ವಿಕೆಟ್ ಒಪ್ಪಿಸಿದರೆ, ತಮೀಮ್ ಇಕ್ಬಾಲ್ ಚಾಹಲ್ ಬೌಲಿಂಗ್'ನಲ್ಲಿ ದೊಡ್ಡಹೊಡೆತಕ್ಕೆ ಕೈಹಾಕಿ ಠಾಕೂರ್ ಹಿಡಿದ ಅದ್ಭುತ ಕ್ಯಾಚ್'ಗೆ ಬಲಿಯಾದರು.

ಇದಾದ ಬಳಿಕವೂ ಚಾಹಲ್ ಕೈಚಳಕ ಮುಂದುವರೆಯಿತು. ಸೌಮ್ಯ ಸರ್ಕಾರ್ ಹಾಗೂ ಮುಷ್ಫಿಕರ್ ರಹೀಮ್ ಕೂಡಾ ಚಾಹಲ್'ಗೆ ಬಲಿಯಾದರು.  ಆ ಬಳಿಕ ಮೊಹಮ್ಮದ್ದುಲ್ಲಾ ಹಾಗೂ ಶಬ್ಬೀರ್ ರೆಹಮಾನ್ ತಂಡಕ್ಕೆ ಆಸರೆಯಾದರು. ಈ ಜೋಡಿ ಬಾಂಗ್ಲಾವನ್ನು ನೂರರ ಗಡಿ ದಾಟಿಸಿದರು. ಉತ್ತಮವಾಗಿ ಆಡುತ್ತಿದ್ದ ಮೊಹಮ್ಮದುಲ್ಲಾ ಹಾಗೂ ನಾಯಕ ಶಕೀವ್ ಅಲ್ ಹಸನ್ ರನೌಟ್'ಗೆ ಬಲಿಯಾದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ದಿಟ್ಟ ಬ್ಯಾಟಿಂಗ್ ನಡೆಸಿದ ಶಬ್ಬೀರ್ ಕೇವಲ 50 ಎಸೆತಗಳಲ್ಲಿ 77 ರನ್ ಸಿಡಿಸಿ ಉನಾದ್ಕತ್'ಗೆ ವಿಕೆಟ್ ಒಪ್ಪಿಸಿದರು. ಇದಾದ ಬೆನ್ನಲ್ಲೇ ನಿರಂತರ ವಿಕೆಟ್ ಕಳೆದುಕೊಂಡ ಬಾಂಗ್ಲಾ ಅಂತಿಮವಾಗಿ 166 ರನ್'ಗಳಿಸಿತು.

ಭಾರತ ಪರ ಚಾಹಲ್ 3, ಉನಾದ್ಕತ್ 2 ಹಾಗೂ ವಾಷಿಂಗ್ಟನ್ ಸುಂದರ್ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ಶಬ್ಬೀರ್ ರೆಹಮಾನ್: 77

ಚಾಹಲ್: 18/3

(*ವಿವರ ಅಪೂರ್ಣ)    

loader