ಗರಿಷ್ಠ ಮೊತ್ತ ಸಿಡಿಸಿ ನ್ಯೂಜಿಲೆಂಡ್ ಮಹಿಳಾ ತಂಡ ವಿಶ್ವದಾಖಲೆ

New Zealand women score world record in ODI
Highlights

ಏಕದಿನ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ಮಹಿಳಾ ತಂಡ ಪುರುಷರ ತಂಡವನ್ನೂ ಮೀರಿಸಿದೆ. ಮಹಿಳೆಯರ ಬ್ಯಾಟಿಂಗ್ ಅಬ್ಬರಕ್ಕೆ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಮೊತ್ತ ದಾಖಲಾಗಿದೆ. ಕಿವೀಸ್ ಮಹಿಳಾ ತಂಡ ಸಿಡಿಸಿದ ಮೊತ್ತವೆಷ್ಟು? ಇಲ್ಲಿದೆ ವಿವರ

ಡಬ್ಲಿನ್ (ಜೂನ್.8): ಏಕದಿನ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ಮಹಿಳಾ ತಂಡ ವಿಶ್ವದಾಖಲೆ ನಿರ್ಮಿಸಿದ್ದಾರೆ. ಐರ್ಲೆಂಡ್‌ನಲ್ಲಿ ನಡೆಯುತ್ತಿರುವ ತ್ರೀಕೋನ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್, 490 ರನ್ ಸಿಡಿಸೋ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಐರ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಮಹಿಳಾ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕಿ ಸುಜಿ ಬೇಟ್ಸ್ ಸಿಡಿಸಿದ 151 ರನ್ ಹಾಗೂ ಮ್ಯಾಡಿ ಗ್ರೀನ್ ಬಾರಿಸಿದ 121 ರನ್‌ಗಳ ನೆರವಿನಿಂದ ನ್ಯೂಜಿಲೆಂಡ್ ಮಹಿಳಾ ತಂಡ 4 ವಿಕೆಟ್ ನಷ್ಟಕ್ಕೆ 490 ರನ್ ಸಿಡಿಸಿತು. ಇದು ಏಕದಿನ ಕ್ರಿಕೆಟ್‌ನಲ್ಲೇ ಗರಿಷ್ಠ ಸ್ಕೋರ್ ಆಗಿದೆ.

ಪುರುಷರ ತಂಡದ ಗರಿಷ್ಠ ಮೊತ್ತ 444 ರನ್. 2016ರಲ್ಲಿ ಪಾಕಿಸ್ತಾನ ವಿರುದ್ದ ಇಂಗ್ಲೆಂಡ್ ತಂಡ ಈ ಸಾಧನೆ ಮಾಡಿತ್ತು. ಆದರೆ ಇದೀಗ ನ್ಯೂಜಿಲೆಂಡ್ ಮಹಿಳಾ ತಂಡ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಮೊತ್ತ ದಾಖಲಿಸಿದೆ. 1997ರಲ್ಲಿ ನ್ಯೂಜಿಲೆಂಡ್ ಮಹಿಳಾ ತಂಡ ಪಾಕಿಸ್ತಾನ ವಿರುದ್ಧ 455 ರನ್ ಸಿಡಿಸಿ ದಾಖಲೆ ಬರೆದಿತ್ತು. ಇದೀಗ 21 ವರ್ಷಗಳ ಬಳಿಕ ನ್ಯೂಜಿಲೆಂಡ್ ತನ್ನ ದಾಖಲೆಯನ್ನ ಉತ್ತಮ ಪಡಿಸಿದೆ.

491 ರನ್‌ಗಳ ಗುರಿ ಬೆನ್ನಟ್ಟಿದ ಐರ್ಲೆಂಡ್ ಮಹಿಳಾ ತಂಡ 35.3 ಓವರ್‌ಗಳಲ್ಲಿ 144 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ನ್ಯೂಜಿಲೆಂಡ್ 346 ರನ್‌ಗಳ ಬೃಹತ್ ಗೆಲವು ಕಂಡಿದೆ.  ಲೈಗ್ ಕಾಸ್ಪರೆಕ್ ದಾಳಿಗೆ ತತ್ತರಿಸಿದ ಐರ್ಲೆಂಡ್ ಅಲ್ಪಮೊತ್ತಕ್ಕೆ ಆಲೌಟ್ ಆಯಿತು. ಕಾಸ್ಪೆರೆಕ್ 4 ವಿಕೆಟ್ ಕಬಳಿಸಿದರು. ವಿಶ್ವದಾಖಲೆ ಬರೆದ ನ್ಯೂಜಿಲೆಂಡ್ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.


 

loader