ರಾಂಚಿಯಲ್ಲಿ ನ್ಯೂಜಿಲೆಂಡ್ ತಂಡದ ಆಟಗಾರರು ಇದ್ದ ಬಸ್ ಅನ್ನು ಧೋನಿ ತಮ್ಮ ಹಮ್ಮರ್ ಕಾರಿನಲ್ಲಿ ಹಿಂದಿಕ್ಕಿದ್ದಾರೆ. ಹಮ್ಮರ್ ಕಾರು ಬಸ್ ಓವರ್‌ಟೇಕ್ ಮಾಡುವಾಗ ಸ್ವತಃ ಧೋನಿ ಕಾರು ಚಲಾಯಿಸುವುದನ್ನು ನೋಡಿದ ನ್ಯೂಜಿಲೆಂಡ್ ಆಟಗಾರರು ಉದ್ಗಾರ ತೆಗೆದಿದ್ದಾರೆ. 

ರಾಂಚಿ(ಅ.27): ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ದುಬಾರಿ ಕಾರಿನ ಕ್ರೇಜ್ ನೋಡಿ ನ್ಯೂಜಿಲೆಂಡ್ ಆಟಗಾರರೇ ಫಿದಾ ಆಗಿದ್ದಾರೆ. 

ರಾಂಚಿಯಲ್ಲಿ ನ್ಯೂಜಿಲೆಂಡ್ ತಂಡದ ಆಟಗಾರರು ಇದ್ದ ಬಸ್ ಅನ್ನು ಧೋನಿ ತಮ್ಮ ಹಮ್ಮರ್ ಕಾರಿನಲ್ಲಿ ಹಿಂದಿಕ್ಕಿದ್ದಾರೆ. ಹಮ್ಮರ್ ಕಾರು ಬಸ್ ಓವರ್‌ ಟೇಕ್ ಮಾಡುವಾಗ ಸ್ವತಃ ಧೋನಿ ಕಾರು ಚಲಾಯಿಸುವುದನ್ನು ನೋಡಿದ ನ್ಯೂಜಿಲೆಂಡ್ ಆಟಗಾರರು ಉದ್ಗಾರ ತೆಗೆದಿದ್ದಾರೆ. 

ಈ ದೃಶ್ಯವನ್ನು ಅದ್ಯಾವ ಪುಣ್ಯಾತ್ಮ ಫೋಟೋ ತೆಗೆದನೋ ಗೊತ್ತಿಲ್ಲ. ಈ ಚಿತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಬಸ್ ಓವರ್‌ ಟೇಕ್ ಮಾಡುತ್ತಿದ್ದಾಗ ಧೋನಿ ಕಾರು ಚಾಲನೆ ಮಾಡುತ್ತಿದ್ದರೆ, ಬಸ್‌ನಲ್ಲಿ ಟಾಮ್ ಲಾಥಮ್ ಧೋನಿ ಅವರನ್ನು ನೋಡಿ ಉದ್ಗರಿಸುತ್ತಿದ್ದಾರೆ. ಹಿಂದೆ ಕುಳಿತಿರುವ ರಾಸ್ ಟೇಲರ್ ಕಾರನ್ನು ಗಮನಿಸುತ್ತಿದ್ದಾರೆ.