ಕಿವೀಸ್ ಪಡೆ ನೀಡಿದ 369 ರನ್’ಗಳ ಸವಾಲಿನ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು 230 ರನ್’ಗಳಿಗೆ ಸರ್ವಪತನ ಕಾಣುವ ಮೂಲಕ ಎರಡನೇ ಪಂದ್ಯದಲ್ಲೂ ಬ್ಲಾಕ್ ಕ್ಯಾಪ್ಸ್’ಗಳೆದುರು ಮಂಡಿಯೂರಿತು.
ಹ್ಯಾಮಿಲ್ಟನ್(ನ.29): ಬ್ಯಾಟಿಂಗ್ ಹಾಗೂ ಬೌಲಿಂಗ್’ನಲ್ಲಿ ಪಾಕಿಸ್ತಾನದ ವಿರುದ್ದ ಸಾಂಘಿಕ ಪ್ರದರ್ಶನ ನೀಡಿದ ನ್ಯೂಜಿಲ್ಯಾಂಡ್ ತಂಡ ಎರಡನೇ ಟೆಸ್ಟ್’ನಲ್ಲಿ 138 ರನ್’ಗಳ ಜಯಭೇರಿ ಬಾರಿಸಿತು. ಈ ಮೂಲಕ ಎರಡು ಟೆಸ್ಟ್ ಪಂದ್ಯಗಳ ಸರನಿಯನ್ನು ಕ್ಲೀನ್ ಸ್ವೀಪ್ ಮಾಡುವುದರ ಜೊತೆಗೆ 31 ವರ್ಷಗಳ ನಂತರ ಪಾಕಿಸ್ತಾನದ ಎದುರು ಸರಣಿ ಜಯ ದಾಖಲಿಸಿತು.
ಕಿವೀಸ್ ಪಡೆ ನೀಡಿದ 369 ರನ್’ಗಳ ಸವಾಲಿನ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು 230 ರನ್’ಗಳಿಗೆ ಸರ್ವಪತನ ಕಾಣುವ ಮೂಲಕ ಎರಡನೇ ಪಂದ್ಯದಲ್ಲೂ ಬ್ಲಾಕ್ ಕ್ಯಾಪ್ಸ್’ಗಳೆದುರು ಮಂಡಿಯೂರಿತು.
ಎರಡನೇ ಇನಿಂಗ್ಸ್’ನಲ್ಲಿ ಪಾಕ್ ಪರ ಶಮಿ ಅಸ್ಲಾಮ್ 91, ಅಜರ್ ಅಲಿ 58 ರನ್’ಗಳಿಸಿ ತಂಡವನ್ನು ಬಚಾವ್ ಮಾಡಲು ಪ್ರಯತ್ನಿಸಿದರಾದರೂ, ಕಿವೀಸ್ ಪರ ಶಿಸ್ತುಬದ್ಧ ದಾಳಿ ನಡೆಸಿದ ನೇಲ್ ವ್ಯಾಗ್ನರ್ 57/3, ಟೀಮ್ ಸೌಥಿ 60/2 ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ನ್ಯೂಜಿಲ್ಯಾಂಡ್ ತಂಡವು ಕ್ರಿಸ್ಟ್’ಚರ್ಚ್’ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 8 ವಿಕೆಟ್’ಗಳ ಗೆಲುವು ಪಡೆದಿತ್ತು