ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಆರಂಭಿಕ ಬ್ಯಾಟ್ಸ್'ಮನ್ ಶಿಖರ್ ಧವನ್ ಹೊರಬಿದ್ದಿದ್ದು, ಅವರ ಸ್ಥಾನದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಕಣಕ್ಕಿಳಿಯಲಿದ್ದಾರೆ. ಮೊದಲ ಟೆಸ್ಟ್ ಪಂದ್ಯ ಜನವರಿ 5 ರಿಂದ ಕೇಪ್'ಟೌನ್'ನಲ್ಲಿ ಆರಂಭವಾಗಲಿದೆ.
ಕೇಪ್'ಟೌನ್(ಜ.03): ನೂತನ ವರ್ಷದ ಸಂದರ್ಭದಲ್ಲಿ ಶುಭ ಕೋರಿರುವ ಭಾರತ ಕ್ರಿಕೆಟ್ ತಂಡದ ಆರಂಭಿಕ ದಾಂಡಿಗ ಕೆ.ಎಲ್.ರಾಹುಲ್, ಇದೇ ವೇಳೆ ಅಭಿಮಾನಿಗಳಿಗೆ ಆರೋಗ್ಯದ ಕುರಿತು ಟಿಪ್ಸ್ ನೀಡಿದ್ದಾರೆ.
‘ಹೊಸ ವರ್ಷದ ವೇಳೆ ಸಾಮಾನ್ಯವಾಗಿ ಪ್ರತಿಯೊಬ್ಬರು ಒಂದೊಂದು ನಿರ್ಧಾರ ಕೈಗೊಳ್ಳುವುದು ಸಾಮಾನ್ಯ. ಈ ವರ್ಷ ಆರೋಗ್ಯಕರ ಜೀವನವನ್ನು ನಿಮ್ಮದಾಗಿಸಿಕೊಳ್ಳಲು ತೀರ್ಮಾನಿಸಿ. ಉಪಾಹಾರ ಆರೋಗ್ಯಕರವಾಗಿರಲಿ. ಬೆಳಗ್ಗೆ 30 ನಿಮಿಷ ವಾಕಿಂಗ್ ಮಾಡಿ ಅಥವಾ ಸ್ವಲ್ಪ ಸಮಯ ಈಜಾಡಿ. ಹೀಗೆ ದಿನವನ್ನು ಆರಂಭಿಸಿ’ ಎಂದು ಟ್ವೀಟ್ ಮಾಡಿದ್ದಾರೆ.