ಹಾಕಿ ವಿಶ್ವಕಪ್: ನೆದರ್‌ಲೆಂಡ್ಸ್ ವಿಶ್ವಚಾಂಪಿಯನ್ಸ್
ಗೋಲಿಗಾಗಿ ಪರದಾಡಿದ ಐರ್ಲೆಂಡ್‌ನ ವಿಶ್ವಕಪ್ ಕನಸು ಭಗ್ನಗೊಂಡಿತು. ನೆದರ್‌ಲೆಂಡ್ಸ್ ಪರ ವೆಲ್ಟೆನ್ (7ನೇ), ಜೊಂಕರ್(19ನೇ), ವ್ಯಾನ್ ಮಾಲೆ(28ನೇ), ಫೆನಿಂಕಿಕ್ಸ್(30ನೇ), ಕೀಟೆಲ್ಸ್(32ನೇ), ವ್ಯಾನ್ ಮಸಾಕ್ಕರ್ (34ನೇ)ತಲಾ ಒಂದು ಗೋಲು ಗಳಿಸಿದರು.
ಲಂಡನ್[ಆ.06]: ಮಹಿಳಾ ಹಾಕಿ ವಿಶ್ವಕಪ್ ಫೈನಲ್’ನಲ್ಲಿ ಗೋಲಿನ ಮಳೆ ಸುರಿಸಿದ ನೆದರ್‌ಲೆಂಡ್ಸ್ 8ನೇ ಬಾರಿಗೆ ವಿಶ್ವಚಾಂಪಿಯನ್ ಆಗಿ ಮೆರೆಯಿತು. ಭಾನುವಾರ ರಾತ್ರಿ ನಡೆದ ಫೈನಲ್‌ನಲ್ಲಿ ನೆದರ್‌ಲೆಂಡ್ಸ್, ಐರ್ಲೆಂಡ್ ವಿರುದ್ಧ 6-0ಗೋಲುಗಳಿಂದ ಭರ್ಜರಿ ಗೆಲುವು ಸಾಧಿಸಿ, ಅಗ್ರ ಸ್ಥಾನ ಉಳಿಸಿಕೊಂಡಿತು.
ಗೋಲಿಗಾಗಿ ಪರದಾಡಿದ ಐರ್ಲೆಂಡ್‌ನ ವಿಶ್ವಕಪ್ ಕನಸು ಭಗ್ನಗೊಂಡಿತು. ನೆದರ್‌ಲೆಂಡ್ಸ್ ಪರ ವೆಲ್ಟೆನ್ (7ನೇ), ಜೊಂಕರ್(19ನೇ), ವ್ಯಾನ್ ಮಾಲೆ(28ನೇ), ಫೆನಿಂಕಿಕ್ಸ್(30ನೇ), ಕೀಟೆಲ್ಸ್(32ನೇ), ವ್ಯಾನ್ ಮಸಾಕ್ಕರ್ (34ನೇ)ತಲಾ ಒಂದು ಗೋಲು ಗಳಿಸಿದರು. 3ನೇ ಸ್ಥಾನಕ್ಕಾಗಿ ನಡೆದ ಪ್ಲೇ ಆಫ್ ಪಂದ್ಯದಲ್ಲಿ ಸ್ಪೇನ್, ಆಸ್ಟ್ರೇಲಿಯಾ ವಿರುದ್ಧ 3-1 ಗೋಲುಗಳಿಂದ ಗೆಲುವು ಸಾಧಿಸಿತು.
ಸ್ವಂತ ದುಡ್ಡಲ್ಲಿ ವಿಶ್ವಕಪ್ ಆಡಿದ ಐರ್ಲೆಂಡ್
ಮಹಿಳಾ ವಿಶ್ವಕಪ್‌ನ ರನ್ನರ್ ಅಪ್ ತಂಡ ಐರ್ಲೆಂಡ್ ತಂಡದ ಹಿಂದೆ ಅನೇಕ ರೋಚಕ ಕತೆಗಳಿವೆ. ಕ್ರೀಡೆಗೆ ಐರ್ಲೆಂಡ್ ಸರ್ಕಾರ ನೀಡುವ ಅನುದಾನ ಕಡಿಮೆ. ಅದರಲ್ಲೂ ಬೇರೆ ಬೇರೆ ಆಟಗಳಿಗೆ ಹಂಚಿಕೆಯಾಗಿ ಮಹಿಳಾ ಹಾಕಿ ತಂಡ ತಲುಪುದು ಸ್ವಲ್ಪ ಮಾತ್ರ. ಇದು ಮೂಲಸೌಕರ್ಯ ಅಭಿವೃದ್ಧಿಗೂ ಸಾಕಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಆಟಗಾರ್ತಿಯರೇ ತಲಾ ₹44 ಸಾವಿರದಷ್ಟು ಮೊತ್ತವನ್ನು ಕೈಯಿಂದ ಹಾಕಿಕೊಂಡು ವಿಶ್ವಕಪ್ ಪ್ರವಾಸ ಕೈಗೊಂಡಿದ್ದಾರೆ.