‘ಕ್ರೀಡೆಯಲ್ಲಿ ಭಾರತದ ಸಾಧನೆ ಹಾಗೂ ದೇಸಿ ಕ್ರೀಡೆಗಳ ಕುರಿತುಬೆಳಕು ಚೆಲ್ಲಲಿದೆ’ ಎಂದು ಗೋಯಲ್ ಹೇಳಿದ್ದಾರೆ.

ನವದೆಹಲಿ(ಆ.24): ಇಲ್ಲಿನ ಜವಾಹರ್‌ಲಾಲ್ ನೆಹರು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಕ್ರೀಡಾ ವಸ್ತುಸಂಗ್ರಹಾಲಯ ಸ್ಥಾಪನೆಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ಕ್ರೀಡಾ ಸಚಿವಾಲಯ ತಿಳಿಸಿದೆ.

‘ಮೂರು ತಿಂಗಳಿಂದ ಈ ಕುರಿತು ಚರ್ಚೆ ನಡೆಸಲಾಗಿದೆ. ಕೊನೆಗೆ ಕ್ರೀಡಾ ಸಚಿವ ವಿಜಯ್ ಗೋಯಲ್,ನೆಹರು ಕ್ರೀಡಾಂಗಣವನ್ನು ಅಂತಿಮಗೊಳಿಸಿದರು’ ಎಂದು ಕ್ರೀಡಾ ಸಚಿವಾಲಯ ತಿಳಿಸಿದೆ.

‘ಕ್ರೀಡೆಯಲ್ಲಿ ಭಾರತದ ಸಾಧನೆ ಹಾಗೂ ದೇಸಿ ಕ್ರೀಡೆಗಳ ಕುರಿತುಬೆಳಕು ಚೆಲ್ಲಲಿದೆ’ ಎಂದು ಗೋಯಲ್ ಹೇಳಿದ್ದಾರೆ.

ಮಾಜಿ ಹಾಗೂ ಹಾಲಿ ಕ್ರೀಡಾಪಟುಗಳು ಬಳಸಿದ ವಸ್ತುಗಳು/ ಸ್ಮರಣಿಕೆಗಳನ್ನು ಕೊಡುಗೆಯಾಗಿ ನೀಡಿದರೆ ಅಂತಹವುಗಳನ್ನು ಶಾಶ್ವತವಾಗಿ ಪ್ರದರ್ಶನಕ್ಕಿಡಲಾಗುತ್ತದೆ ಎಂದು ಗೋಯೆಲ್ ತಿಳಿಸಿದ್ದಾರೆ