National Sports Day: ಕ್ರೀಡಾಭಿಮಾನಿಗಳು ತಿಳಿದಿರಲೇಬೇಕಾದ ಇಂಟ್ರೆಸ್ಟಿಂಗ್ ಸಂಗತಿಗಳಿವು..!

ದೇಶಾದ್ಯಂತ ಇಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆ ಆಚರಣೆ
ಹಾಕಿ ದಿಗ್ಗಜ ಮೇಜರ್ ಧ್ಯಾನ್‌ ಚಂದ್ ಜನ್ಮ ದಿನದ ಸ್ಮರಣಾರ್ಥ ಕ್ರೀಡಾ ದಿನಾಚರಣೆ ಆಚರಣೆ
2012ರಿಂದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಆಚರಣೆ

National Sports Day 2022 History significance all sports fans need to know kvn

ಬೆಂಗಳೂರು(ಆ.29): ದೇಶಾದ್ಯಂತ ಆಗಸ್ಟ್ 29ರಂದು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತದ ಹಾಕಿ ದಿಗ್ಗಜ ಆಟಗಾರ ಮೇಜರ್ ಧ್ಯಾನ್‌ ಚಂದ್‌ ಹುಟ್ಟುಹಬ್ಬವನ್ನೇ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷ ನಾವೆಲ್ಲರೂ ಮೇಜರ್ ಧ್ಯಾನ್ ಚಂದ್ ಅವರ 117ನೇ  ಜನ್ಮದಿನೋತ್ಸವನನ್ನು ಆಚರಿಸುತ್ತಿದ್ದೇವೆ.  ಹಾಕಿ ಮಾಂತ್ರಿಕ ಧ್ಯಾನ್‌ ಚಂದ್ ಆಗಸ್ಟ್ 29, 1905ರಲ್ಲಿ ಜನಿಸಿದ್ದರು. ರಾಷ್ಟ್ರೀಯ ಕ್ರೀಡಾ ದಿನಾಚರಣೆಯಂದು ಪ್ರತಿನಿತ್ಯ ಜೀವನದಲ್ಲಿ ಕ್ರೀಡೆಯ ಮಹತ್ವವನ್ನು ಹಾಗೂ ಅಗತ್ಯತೆಯ ಅರಿವನ್ನು ಮೂಡಿಸಲಾಗುತ್ತದೆ.

ಕ್ರೀಡಾ ಕ್ಷೇತ್ರದಲ್ಲಿ ಅದ್ವಿತಿಯ ಸಾಧನೆ ಮಾಡಿದ ಸಾಧಕರಿಗೆ, ಚಾಂಪಿಯನ್‌ಗಳಿಗೆ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ ಕ್ರೀಡಾಪಟುಗಳಿಗೆ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಅರ್ಪಿಸಲಾಗುತ್ತದೆ. ರಾಷ್ಟ್ರೀಯ ಕ್ರೀಡಾ ದಿನಾಚರಣೆಯಂದು, ಕ್ರೀಡೆಗಳ ಮೌಲ್ಯ, ಶಿಸ್ತು, ಸಂಯಮ, ಕ್ರೀಡಾ ಸ್ಪೂರ್ತಿ, ಟೀಂ ವರ್ಕ್‌, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆಯತ್ತ ಒಲವು ತೋರಿಸುವಂತೆ ಪ್ರೇರೇಪಣೆ ಮಾಡಲು ಈ ದಿನವನ್ನು ಬಳಸಿಕೊಳ್ಳಲಾಗುತ್ತದೆ.

ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಇತಿಹಾಸ:

ಮೇಜರ್ ಧ್ಯಾನ್‌ ಚಂದ್‌ ಅವರ ಜನ್ಮದಿನವನ್ನೇ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನಾಗಿ ಆಚರಿಸಲು 2012ರಲ್ಲಿ ಭಾರತ ಸರ್ಕಾರವು ತೀರ್ಮಾನಿಸಿತು. ಇನ್ನು ಧ್ಯಾನ್‌ ಚಂದ್ ತುಂಬಾ ಚಿಕ್ಕವರಿದ್ದಾಗಲೇ ಭಾರತೀಯ ಸೇನೆಯನ್ನು ಸೇರಿದ್ದರು. ಅಲ್ಲಿ ಕೋಚ್ ಪಂಕಜ್ ಗುಪ್ತಾ ಅವರಿಂದ ಹಾಕಿ ಆಡುವುದನ್ನು ಕಲಿತರು. ಅದರಲ್ಲೂ ಬಾಲ್‌ ಡ್ರಿಬ್ಲಿಂಗ್ ಮಾಡುವುದರಲ್ಲಿ ಅಸಾಮಾನ್ಯ ಕೌಶಲ್ಯವನ್ನು ಕರಗತ ಮಾಡಿಕೊಂಡ ಧ್ಯಾನ್‌ ಚಂದ್, ಭಾರತ ಹಾಕಿ ತಂಡ ಕೂಡಿಕೊಂಡ ಕೆಲವೇ ಸಮಯದಲ್ಲಿ ತಂಡದ ನಾಯಕರಾಗಿಯೂ ನೇಮಕವಾದರು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಧ್ಯಾನ್ ಚಂದ್ ತಮ್ಮ ಅಸಮಾನ್ಯ ಪ್ರದರ್ಶನದ ಮೂಲಕ ಮನೆ ಮಾತಾಗಿದ್ದರು. 

Asia Cup: ನರೇಂದ್ರ ಮೋದಿ to ರಾಹುಲ್‌ ಗಾಂಧಿ, ಪಾಕ್‌ ಬಗ್ಗುಬಡಿದ ಟೀಂ ಇಂಡಿಯಾಗೆ ಜೈ ಹೋ..!

ಧ್ಯಾನ್ ಚಂದ್ ತಮ್ಮ ಹಾಕಿ ವೃತ್ತಿಜೀವನದಲ್ಲಿ ಮೂರು ಬಾರಿ ಒಲಿಂಪಿಕ್ಸ್‌ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಧ್ಯಾನ್ ಚಂದ್ 1928, 1932 ಹಾಗೂ 1936ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಇಲ್ಲಿಯವರೆಗೂ ಪದ್ಮ ವಿಭೂಷಣ ಪ್ರಶಸ್ತಿ ಪಡೆದ ಏಕೈಕ ಹಾಕಿ ಆಟಗಾರ ಎನ್ನುವ ಹಿರಿಮೆ ಕೂಡಾ ಧ್ಯಾನ್ ಚಂದ್ ಅವರ ಹೆಸರಿನಲ್ಲಿದೆ. ಭಾರತೀಯ ಸೇನೆಯಲ್ಲಿ ಪಂಜಾಬ್ ರೆಜಿಮೆಂಟ್‌ನಲ್ಲಿ ಸೇವೆಸಲ್ಲಿಸಿದ್ದ ಧ್ಯಾನ್‌ ಚಂದ್‌, 1956ರಲ್ಲಿ ಮೇಜರ್ ಹುದ್ದೆಯಲ್ಲಿದ್ದಾಗ ನಿವೃತ್ತಿಯಾದರು. ಇದೇ ವರ್ಷ ಭಾರತ ಸರ್ಕಾರವೂ ಧ್ಯಾನ್‌ ಚಂದ್ ಅವರ ಸಾಧನೆಯನ್ನು ಪರಿಗಣಿಸಿದ ದೇಶದ ಮೂರನೇ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.

ಧ್ಯಾನ್ ಚಂದ್‌ ಅವರ ಹಾಕಿ ಪ್ರದರ್ಶನಕ್ಕೆ ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಧ್ಯಾನ್ ಚಂದ್ ಭಾರತ ಕ್ರೀಡಾ ಜಗತ್ತು ಕಂಡ ಸರ್ವಶ್ರೇಷ್ಠ ಕ್ರೀಡಾಪಟುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ.

ಇನ್ನು ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಸಂದರ್ಭದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ. ಪ್ರಧಾನಿ ಮೋದಿ ನಾಷನಲ್ ಸ್ಪೋರ್ಟ್ಸ್‌ ಡೇ ಮಹತ್ವದ ಬಗ್ಗೆ ವಿಡಿಯೋ ಸಂದೇಶ ರವಾನಿಸುವ ಮೂಲಕ ವಿನೂತನವಾಗಿ ಶುಭ ಹಾರೈಸಿದ್ದಾರೆ.

Latest Videos
Follow Us:
Download App:
  • android
  • ios