Asianet Suvarna News Asianet Suvarna News

ರಾಷ್ಟ್ರೀಯ ಬ್ಯಾಡ್ಮಿಂಟನ್‌: ಸೈನಾ ನೆಹ್ವಾಲ್, ಸೌರಭ್‌ ಚಾಂಪಿಯನ್‌

ರಾಷ್ಟ್ರೀಯ ಬ್ಯಾಡ್ಮಿಂಟನ್‌ ಫೈನಲ್ ಪಂದ್ಯದಲ್ಲಿ ಸತತ 2ನೇ ಬಾರಿ ಸಿಂಧು ವಿರುದ್ಧ  ಸೈನಾ ನೆಹ್ವಾಲ್ ಗೆಲುವು ಸಾಧಿಸಿದ್ದಾರೆ. ಪುರುಷರ ಸಿಂಗಲ್ಸ್‌ ಚಾಂಪಿಯನ್‌ ಆಗಿ ಮಧ್ಯಪ್ರದೇಶದ ಸೌರಭ್‌ ವರ್ಮಾ ಹೊರಹೊಮ್ಮಿದ್ದಾರೆ.

National Badminton Saina Nehwal and sourabh varma clinch the title
Author
Bengaluru, First Published Feb 17, 2019, 9:43 AM IST

ಗುವಾಹಟಿ(ಫೆ.17): ಭಾರತದ ತಾರಾ ಶಟ್ಲರ್‌ ಸೈನಾ ನೆಹ್ವಾಲ್‌, ಒಲಿಂಪಿಕ್‌ ಬೆಳ್ಳಿ ವಿಜೇತೆ ಪಿ.ವಿ.ಸಿಂಧು ವಿರುದ್ಧ ಸುಲಭ ಗೆಲುವು ಸಾಧಿಸುವ ಮೂಲಕ 83ನೇ ರಾಷ್ಟ್ರೀಯ ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳಾ ಸಿಂಗಲ್ಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಸತತ 2ನೇ ವರ್ಷ ಸಿಂಧು ವಿರುದ್ಧ ಫೈನಲ್‌ ಆಡಿದ ಸೈನಾ, 21-18, 21-15 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿ, 4ನೇ ಬಾರಿಗೆ ರಾಷ್ಟ್ರೀಯ ಚಾಂಪಿಯನ್‌ ಆದರು.

ಇದನ್ನೂ ಓದಿ: ತನ್ನ ಜಾಕೆಟ್ ಮೇಲೆ ಸಹಿ ಮಾಡಿ ಅಭಿಮಾನಿಗೆ ನೀಡಿದ ಜೋಕೋವಿಚ್

ಕಳೆದ ವರ್ಷ ನಾಗ್ಪುರದಲ್ಲಿ ನಡೆದಿದ್ದ ಟೂರ್ನಿಯ ಫೈನಲ್‌ನಲ್ಲೂ 2012ರ ಒಲಿಂಪಿಕ್ಸ್‌ ಕಂಚು ವಿಜೇತೆ ಸೈನಾ, ಸಿಂಧು ವಿರುದ್ಧ ಜಯಭೇರಿ ಬಾರಿಸಿದ್ದರು. ಕಳೆದ ವರ್ಷ ಗೋಲ್ಡ್‌ಕೋಸ್ಟ್‌ ಕಾಮನ್‌ವೆಲ್ತ್‌ ಕ್ರೀಡಾಕೂಟದ ಫೈನಲ್‌ನಲ್ಲೂ ಸೈನಾ, ಸಿಂಧು ವಿರುದ್ಧ ಗೆಲುವು ಪಡೆದಿದ್ದರು. ಭಾರತದ ತಾರಾ ಶಟ್ಲರ್‌ಗಳ ನಡುವಿನ ಫೈನಲ್‌ ಸೆಣಸಾಟ ಭಾರೀ ಕುತೂಹಲ ಕೆರಳಿಸಿತ್ತು. ಭಾರೀ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ರೋಚಕ ಪಂದ್ಯಕ್ಕೆ ಸಾಕ್ಷಿಯಾದರು.

ಇದನ್ನೂ ಓದಿ: ಸೆಪ್ಟೆಂಬರ್‌ನಲ್ಲಿ ಭಾರತ-ಪಾಕ್‌ ಡೇವಿಸ್‌ ಕಪ್‌ ಅನುಮಾನ!

ಲಕ್ಷ್ಯ ವಿರುದ್ಧ ಗೆದ್ದ ಸೌರಭ್‌: ಪುರುಷರ ಸಿಂಗಲ್ಸ್‌ ಚಾಂಪಿಯನ್‌ ಆಗಿ ಮಧ್ಯಪ್ರದೇಶದ ಸೌರಭ್‌ ವರ್ಮಾ ಹೊರಹೊಮ್ಮಿದರು. ಫೈನಲ್‌ನಲ್ಲಿ 17 ವರ್ಷದ ಲಕ್ಷ್ಯ ಸೆನ್‌ ವಿರುದ್ಧ 21-18, 21-13 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದ ಸೌರಭ್‌ 3ನೇ ಬಾರಿಗೆ ರಾಷ್ಟ್ರೀಯ ಚಾಂಪಿಯನ್‌ ಪಟ್ಟಕ್ಕೇರಿದರು. 2011, 2017ರಲ್ಲಿ ಅವರು ಪ್ರಶಸ್ತಿ ಜಯಿಸಿದ್ದರು. ಪುರುಷರ ಡಬಲ್ಸ್‌ನಲ್ಲಿ ಪ್ರಣವ್‌ ಜೆರ್ರಿ ಚೋಪ್ರಾ ಹಾಗೂ ಚಿರಾಗ್‌ ಶೆಟ್ಟಿಜೋಡಿ ಪ್ರಶಸ್ತಿ ಗೆದ್ದುಕೊಂಡಿತು.
 

Follow Us:
Download App:
  • android
  • ios