Asianet Suvarna News Asianet Suvarna News

ಕಿರಿಯರ ಅಥ್ಲೆಟಿಕ್ಸ್: ರಾಜ್ಯಕ್ಕೆ ಮತ್ತೆರಡು ಚಿನ್ನದ ಗರಿ..!

ಶುಕ್ರವಾರ ಅಂಡರ್‌-16 ಬಾಲಕರ 1000 ಮೀ. ಸ್ಪ್ರಿಂಟ್‌ ಮೆಡ್ಲೆ ವಿಭಾಗದಲ್ಲಿ ಸವಿನ್‌, ಸಯೀದ್‌ ಸುಲೇಮಾನ್‌, ಮೋನಿಶ್‌, ಆಯುಶ್ ತಂಡ ಚಿನ್ನ ಗೆದ್ದರೆ, ಅಂ-18 ಬಾಲಕಿಯರ 800 ಮೀ.ನಲ್ಲಿ ಪ್ರಿಯಾಂಕಾ ಓಲೇಕಾರ್‌ ಬಂಗಾರದ ಸಾಧನೆ ಮಾಡಿದರು.

Nation Junior Athletics Karnataka Clinch 2 Gold medal kvn
Author
First Published Nov 11, 2023, 12:27 PM IST

ಕೊಯಮತ್ತೂರು(ನ.11): 38ನೇ ರಾಷ್ಟ್ರೀಯ ಕಿರಿಯರ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ 14 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಕೊನೆ ದಿನ ರಾಜ್ಯದ ಅಥ್ಲೀಟ್‌ಗಳೂ 2 ಚಿನ್ನ, 4 ಬೆಳ್ಳಿ ಪದಕ ಪಡೆದರು. ಇದರೊಂದಿಗೆ ರಾಜ್ಯ ಒಟ್ಟಾರೆ 06 ಚಿನ್ನ, 05 ಬೆಳ್ಳಿ, 03 ಕಂಚಿನ ಪದಕದೊಂದಿಗೆ ಪಟ್ಟಿಯಲ್ಲಿ 00ನೇ ಸ್ಥಾನಿಯಾಯಿತು.

ಶುಕ್ರವಾರ ಅಂಡರ್‌-16 ಬಾಲಕರ 1000 ಮೀ. ಸ್ಪ್ರಿಂಟ್‌ ಮೆಡ್ಲೆ ವಿಭಾಗದಲ್ಲಿ ಸವಿನ್‌, ಸಯೀದ್‌ ಸುಲೇಮಾನ್‌, ಮೋನಿಶ್‌, ಆಯುಶ್ ತಂಡ ಚಿನ್ನ ಗೆದ್ದರೆ, ಅಂ-18 ಬಾಲಕಿಯರ 800 ಮೀ.ನಲ್ಲಿ ಪ್ರಿಯಾಂಕಾ ಓಲೇಕಾರ್‌ ಬಂಗಾರದ ಸಾಧನೆ ಮಾಡಿದರು. ಅಂ-20 ಮಹಿಳೆಯರ ಹೆಪ್ಟಥ್ಲಾನ್‌ನಲ್ಲಿ ಪವನಾ ನಾಗರಾಜ್‌, 400 ಮೀ. ಹರ್ಡಲ್ಸ್‌ನಲ್ಲಿ ಶ್ರೇಯಾ ರಾಜೇಶ್‌, ಅಂ-20 ಪುರುಷರ 5000 ಮೀ.ನಲ್ಲಿ ಶಿವಾಜಿ ಮಾದಪ್ಪ ಹಾಗೂ ಅಂ-18 ಮಹಿಳೆಯರ 1000 ಮೀ. ಸ್ಪ್ರಿಂಟ್‌ ಮೆಡ್ಲೆಯಲ್ಲಿ ಸ್ತುಥಿ ಶೆಟ್ಟಿ, ಗೀತಾ, ವೈಭವಿ, ರೀಥುಶ್ರೀ ತಂಡಕ್ಕೆ ಬೆಳ್ಳಿ ಪದಕ ಲಭಿಸಿತು.

ಕ್ರಿಕೆಟ್‌ ವಿಶ್ವಕಪ್‌ಗೂ ದೀಪಾವಳಿ ಟಚ್‌, ಗೇಟ್‌ವೇ ಆಫ್‌ ಇಂಡಿಯಾದಲ್ಲಿ ಬೆಳಕಿನ ಚಿತ್ತಾರ!

ಕ್ರಿಮಿನಲ್‌ ಮಾನನಷ್ಟ ಕೇಸ್‌: ಭಜರಂಗ್‌ಗೆ ಜಾಮೀನು

ನವದೆಹಲಿ: ಕೋಚ್‌ ನರೇಶ್‌ ದಹಿಯಾ ಹೂಡಿದ್ದ ಪ್ರಕರಣದಲ್ಲಿ ಕುಸ್ತಿಪಟು ಭಜರಂಗ್‌ ಪೂನಿಯಾಗೆ ಡೆಲ್ಲಿ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ಭಾರತೀಯ ಕುಸ್ತಿ ಫೆಡರೇಶನ್‌(ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ, ತಮ್ಮ ಹೆಸರಿಗೆ ಕಳಂಕ ತಂದಿದ್ದಾರೆಂದು ಭಜರಂಗ್‌ ವಿರುದ್ಧ ನರೇಶ್‌ ಪ್ರಕರಣ ದಾಖಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಭಜರಂಗ್‌ಗೆ ಜಾಮೀನು ನೀಡಿ, ಮಾರ್ಚ್‌ 5ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿತು.

ಸೆಹ್ವಾಗ್‌ ಟ್ರೋಲ್‌ಗೆ ಉರಿದುಕೊಂಡ ಪಾಕಿಸ್ತಾನ, 'ಭಾರತದಲ್ಲಿ ಮುಸ್ಲಿಮರು ಸೇಫ್‌' ಅಲ್ಲ ಎಂದ ಪಾಕ್‌ ಅಭಿಮಾನಿ!

ಕ್ರೀಡೆ, ಕ್ರೀಡಾಪಟುಗಳನ್ನು ಬೆಂಬಲಿಸಲು ಸರ್ಕಾರಗಳಿಗೆ ಉಪ ರಾಷ್ಟ್ರಪತಿ ಕರೆ

ಪಣಜಿ: 37ನೇ ರಾಷ್ಟ್ರೀಯ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಉಪ ರಾಷ್ಟ್ರಪತಿ ಜಗ್‌ದೀಪ್‌ ಧನ್‌ಕರ್‌, ಕ್ರೀಡೆ ಹಾಗೂ ಕ್ರೀಡಾಪಟುಗಳನ್ನು ಬೆಂಬಲಿಸುವಂತೆ ಸರ್ಕಾರಗಳು, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಿಗೆ ಕರೆ ನೀಡಿದರು. ‘ಕ್ರೀಡೆಯಲ್ಲಿ ಅಭಿವೃದ್ಧಿ ಸಾಧಿಸಿದರೆ, ದೇಶದ ಅಭಿವೃದ್ಧಿಯೂ ಆಗುತ್ತದೆ. ನಮ್ಮ ಕ್ರೀಡಾಪಟುಗಳು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಸಾಧನೆ ಮಾಡಲು ಎಲ್ಲರ ಬೆಂಬಲ ಅಗತ್ಯ’ ಎಂದರು.

Follow Us:
Download App:
  • android
  • ios