Asian Games 2023: ನಾನು ನಂದಿನಿ ಕಂಚು ತಂದಿನಿ ಎಂದ ಬಳ್ಳಾರಿ ಯುವತಿ!

ನಾನು ನಂದಿನಿ  ಕಂಚು ತಂದಿನಿ ಎನ್ನುತ್ತ ಏಷ್ಯನ್ ಕ್ರೀಡಾಕೂಟದಲ್ಲಿ ಸಿರಗುಪ್ಪ ಮೂಲದ ಯುವತಿ‌ ಭರ್ಜರಿ ಸಾಧನೆ ಮಾಡಿದ್ದಾರೆ. ಬಟ್ಟೆ ಒಗೆಯುವ ಕಾಯಕದ ಅಗಸರ ನಂದಿನಿ ಸಾಧನೆಗೆ ಎಲ್ಲೇಡೆ ಮೆಚ್ಚುಗೆಯ ಮಹಾಪೂರ ಹರಿದು ಬಂದಿದೆ. 

Nandini who hails from Siraguppa won bronze in the Asian Games 2023 gvd

ಬಳ್ಳಾರಿ (ಅ.06): ನಾನು ನಂದಿನಿ  ಕಂಚು ತಂದಿನಿ ಎನ್ನುತ್ತ ಏಷ್ಯನ್ ಕ್ರೀಡಾಕೂಟದಲ್ಲಿ ಸಿರಗುಪ್ಪ ಮೂಲದ ಯುವತಿ‌ ಭರ್ಜರಿ ಸಾಧನೆ ಮಾಡಿದ್ದಾರೆ. ಬಟ್ಟೆ ಒಗೆಯುವ ಕಾಯಕದ ಅಗಸರ ನಂದಿನಿ ಸಾಧನೆಗೆ ಎಲ್ಲೇಡೆ ಮೆಚ್ಚುಗೆಯ ಮಹಾಪೂರ ಹರಿದು ಬಂದಿದೆ. ಮೂಲತಃ ಸಿರಗುಪ್ಪ ತಾಲೂಕಿನ  ಶ್ರೀರಾಂಪುರ ಕ್ಯಾಂಪ್‌ನಲ್ಲಿ ನಂದಿನಿ ವಾಸವಾಗಿದ್ರು.ನಂದಿನಿ ಮಗುವಾಗಿದ್ದಾಗಲೇ ತಂದೆ ಯಲ್ಲಪ್ಪ ಜೀವನ ನಿರ್ವಹಣೆಗಾಗಿ ಹೈದ್ರಾಬಾದ್‌ನ ಸಿಕಿದ್ರಾಬಾದ್ ಸೇರಿದ್ರು. 

ಬಡತನ ಮೆಟ್ಟಿನಿಂತು ಚೀನದಲ್ಲಿ ನಡೆಯುತ್ತಿರೋ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ್ದಾರೆ. ಹೆಪ್ದಥ್ಲಾನ್ ನಲ್ಲಿ ಕಂಚು ಪಡೆಯೋ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ಈಗಲೂ ಕುಟುಂಬ ವಂಶ ಪಾರಂಪರ್ಯವಾಗಿ ಬಂದಿರೋ ಬಟ್ಟೆಗಳನ್ನು ಒಗೆಯೋ‌ ಮತ್ತು ಇಸ್ತ್ರಿ ಮಾಡೋ ಕಾಯಕ ಮಾಡ್ತಿದೆ. ಬಡತನದಲ್ಲಿಯೂ‌ ಮಗಳಿಗೆ ಒಳ್ಳೆಯ ತರಬೇತಿ ನೀಡಿಸೋ‌ ಮೂಲಕ ಮಗಳಿಗೆ ತಂದೆ ಯಲ್ಲಪ್ಪ  ಬೆನ್ನುಲುಬಾಗಿದ್ದಾರೆ.

5000 ತಾಂಡಾಗಳಿಗೆ ಕಂದಾಯ ಗ್ರಾಮ ಪಟ್ಟ: ಸಿಎಂ ಸಿದ್ದರಾಮಯ್ಯ

ನಂದಿನಿ ವಿರುದ್ದ ಸಪ್ನಾ ಬರ್ಮನ್ ವಿವಾದದ ಕಿಡಿ: ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಆದರೆ ಭವಸೆ ಇಟ್ಟಿದ್ದ ಕೆಲ ಕ್ರೀಡಾಪಟುಗಳು ಪದಕ ಕೈವಶ ಮಾಡಲು ವಿಫಲರಾಗಿದ್ದಾರೆ. ಈ ಪೈಕಿ ಹೆಪ್ಟಾಥ್ಲಾನ್‌ನಲ್ಲಿ  ಡಿಫೆಂಡಿಂಗ್ ಚಾಂಪಿಯನ್ ಆಗಿದ್ದ ಸಪ್ನಾ ಬರ್ಮನ್‌ ಈ ಬಾರಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಕೇವಲ 4 ಅಂಕಗಳಿಂದ ಕಂಚಿನ ಪದಕ ಮಿಸ್ ಮಾಡಿಕೊಂಡಿದ್ದಾರೆ. ಇತ್ತ ಭಾರತದ ಮತ್ತೊರ್ವ ಕ್ರೀಡಾಪಟು ನಂದಿನಿ ಕಂಚಿನ ಪದಕ ಗೆದ್ದು ಸಂಭ್ರಮಿಸಿದ್ದಾರೆ. ಪದಕ ಕೈತಪ್ಪಿದ ಬೆನ್ನಲ್ಲೇ ಸಪ್ನಾ ಬರ್ಮನ್ ಭಾರಿ ಆಕ್ರೋಶ ಹೊರಹಾಕಿದ್ದಾರೆ. 

ನನಗೆ ಪದಕ ಕೈತಪಲು ಮಂಗಳಮುಖಿ ನಂದಿನಿ ಅಗಸರ ಕಾರಣ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಭಾರಿ ವಿವಾದ ಸೃಷ್ಟಿಸಿದ್ದಾರೆ. ಆದರೆ ಪರಿಸ್ಥಿತಿ ಕೈಮೀರುತ್ತಿದ್ದಂತೆ ಸಪ್ನಾ ಬರ್ಮನ್ ಪೋಸ್ಟ್ ಡಿಲೀಟ್ ಮಾಡಿದ್ದಾರೆ. 2018ರ ಏಷ್ಯನ್ ಗೇಮ್ಸ್ ಹೆಪ್ಟಾಥ್ಲಾನ್‌ನಲ್ಲಿ  ಸಪ್ನಾ ಬರ್ಮನ್ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಈ ಬಾರಿಯೂ ಚಿನ್ನದ ಪದಕ ನಿರೀಕ್ಷೆಯಲ್ಲಿದ್ದ  ಸಪ್ನಾ ಬರ್ಮನ್ ಕನಿಷ್ಠ ಕಂಚಿನ ಪದಕ ಗೆಲ್ಲಲು ಸಾಧ್ಯವಾಗಿಲ್ಲ. ಇದು ಸಪ್ನಾ ಬರ್ಮನ್ ಆಕ್ರೋಶಕ್ಕೆ ಕಾರಣವಾಗಿದೆ. 

ಸರ್ಕಾರ ಹಿಂದೂ ವಿರೋಧಿ ಮಾತ್ರವಲ್ಲ, ಮಹಿಳೆಯ ವಿರೋಧಿ ಸರ್ಕಾರ: ನಳೀನ್ ಕುಮಾರ್ ಕಟೀಲ್‌

ಸಪ್ನಾಗೆ ತೀವ್ರ ಪ್ರತಿಸ್ಪರ್ದೆ ಒಡ್ಡಿದ ನಂದಿನಿ ಅಗಸರ ಕೇವಲ ನಾಲ್ಕೇ ನಾಲು ಅಂಕಗಳಿಂದ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಕಳೆದ ಬಾರಿ ಚಿನ್ನದ ಪದಕದೊಂದಿಗೆ ಭಾರತಕ್ಕೆ ಮರಳಿದ ಸಪ್ನಾ ಬರ್ಮನ್‌ಗೆ ಅದ್ಧೂರಿ ಸ್ವಾಗತ ಸಿಕ್ಕಿತ್ತು. ಸರ್ಕಾರಗಳು ಬಹುಮಾನ ಮೊತ್ತ ಕೂಡ ಘೋಷಣೆ ಮಾಡಿತ್ತು. ಆದರೆ ಈ ಬಾರಿ ಖಾಲಿ ಕೈಯೊಂದಿಗೆ ತವರಿಗೆ ಮರಳಿದ ಸಪ್ನಾ ಬರ್ಮನ್‌ಗೆ ನಿರಾಸೆಯಾಗಿದೆ.ಇದು ಸಪ್ನಾ ಬರ್ಮನ್ ಆಕ್ರೋಶಕ್ಕೆ ಕಾರಣವಾಗಿದೆ.

Latest Videos
Follow Us:
Download App:
  • android
  • ios