ನಲಪಾಡ್ ಐವರು ಸಹಚರರು ಆರೆಸ್ಟ್

First Published 18, Feb 2018, 6:30 PM IST
Nalapad 5 Aides Arrest
Highlights

ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ನಲಪಾಡ್ ಸಹಚರರರಾದ ಬಾಲಕೃಷ್ಣ, ಮಂಜುನಾಥ್, ಅಭಿಷೇಕ್, ನಫಿ ಅಹಮದ್, ಅರುಣ್ ಬಾಬು ಎನ್ನುವವರನ್ನು ಬಂಧಿಸಿದ್ದಾರೆ.

ಬೆಂಗಳೂರು(ಫೆ18): ಉದ್ಯಮಿಯೊಬ್ಬರ ಪುತ್ರ ವಿಧ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಎನ್'ಎ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಜೊತೆಗಿದ್ದ ಐವರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಇದುವರೆಗೂ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ನಲಪಾಡ್'ರನ್ನು ಬಂಧಿಸಿಲ್ಲ. ಘಟನೆ ನಡೆದು 20 ಗಂಟೆ ಕಳೆದರೂ ನಳಪಾಡ್ ಬಂಧಿಸುವುದು ಯಾವಾಗ ಎನ್ನುವ ಪ್ರಶ್ನೆ ಜೋರಾಗಿದೆ

ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ನಲಪಾಡ್ ಸಹಚರರರಾದ ಬಾಲಕೃಷ್ಣ, ಮಂಜುನಾಥ್, ಅಭಿಷೇಕ್, ನಫಿ ಅಹಮದ್, ಅರುಣ್ ಬಾಬು ಎನ್ನುವವರನ್ನು ಬಂಧಿಸಿದ್ದಾರೆ.

ಶಾಸಕನ ಪುತ್ರನ ಹಲ್ಲೆ ಖಂಡಿಸಿ ಬಿಜೆಪಿ ಬೀದಿಗಿಳಿದಿದ್ದು, ಆರೋಪಿ ನಲಪಾಡ್ ಅವರನ್ನು ಶೀಘ್ರವೇ ಬಂಧಿಸಬೇಕೆಂದು ಮಲ್ಯ ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

loader