0,0,0,0,0,0,0,0,0 ಇದು ಆಟಗಾರರು ಗಳಿಸಿದ ಮೊತ್ತ. 10 ವಿಕೇಟ್'ಗಳಲ್ಲಿ ಮಿನ್ನು ಮಣಿ 4 ವಿಕೇಟ್ ಕಬಳಿಸಿದರೆ, ಸೌರಭ್ಯ 2 ವಿಕೇಟ್ ಕಿತ್ತರು. ಒಂದು ವಿಕೇಟ್ ರನ್ ಔಟ್'ನಿಂದ ಆಯಿತು. ಉಳಿದ ಮೂರು ವಿಕೇಟ್'ಗಳನ್ನು ತಲಾ ಒಬ್ಬೊಬ್ಬರು ಪಡೆದರು.

ಗುಂಟೂರ್(ನ.24): ಭಾರತ ಪ್ರಥಮ ಹಂತದ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಇತಿಹಾಸ ದಾಖಲಾಗಿದೆ. ಕೇವಲ 2 ರನ್ನಿಗೆ ಇಡೀ ತಂಡವೇ ಆಲ್'ಔಟ್ ಆಗಿದೆ. ಆ 2 ರನ್'ಗಳಲ್ಲಿ ಆಟಗಾರ ಗಳಿಸಿದ್ದು ಒಂದು ರನ್ ಆದರೆ ವೈಡ್'ನಿಂದ ಮತ್ತೊಂದು ರನ್ ಬಂದಿದೆ.

ಆಂಧ್ರಪ್ರದೇಶದ ಗುಂಟೂರಿನಲ್ಲಿ ಬಿಸಿಸಿಐ ಹಮ್ಮಿಕೊಂಡ 19 ವರ್ಷದೊಳಗಿನ ಮಹಿಳಾ ಟೂರ್ನ'ಮೆಂಟ್'ನ 50 ಓವರ್'ಗಳ ಏಕದಿನ ಪಂದ್ಯದಲ್ಲಿ ನಾಗಲ್ಯಾಂಡ್ ತಂಡ ಕೇರಳ ವಿರುದ್ಧ ಕೇವಲ 2 ರನ್ನಿಗೆ ಆಲ್'ಔಟ್ ಆಗಿದೆ. 2 ರನ್ ಗಳಿಸಲು ನಾಗಲ್ಯಾಂಡ್ ತೆಗೆದುಕೊಂಡಿದ್ದು ಬರೋಬ್ಬರಿ 17 ಓವರ್ ಅಂದರೆ 102 ಬಾಲ್'ಗಳು.

0,0,0,0,0,0,0,0,0 ಇದು ಆಟಗಾರರು ಗಳಿಸಿದ ಮೊತ್ತ. 10 ವಿಕೇಟ್'ಗಳಲ್ಲಿ ಮಿನ್ನು ಮಣಿ 4 ವಿಕೇಟ್ ಕಬಳಿಸಿದರೆ, ಸೌರಭ್ಯ 2 ವಿಕೇಟ್ ಕಿತ್ತರು. ಒಂದು ವಿಕೇಟ್ ರನ್ ಔಟ್'ನಿಂದ ಆಯಿತು. ಉಳಿದ ಮೂರು ವಿಕೇಟ್'ಗಳನ್ನು ತಲಾ ಒಬ್ಬೊಬ್ಬರು ಪಡೆದರು.

2 ರನ್ ಬೆನ್ನಟ್ಟಿದ ಕೇರಳ ವನಿತೆಯರು ಕೇವಲ ಒಂದು ಎಸತದಲ್ಲಿ ಗುರಿ ಮುಟ್ಟಿದರು. ನಾಗಲ್ಯಾಂಡ್ ಅಂಡರ್ 19 ವನಿತೆಯರ ತಂಡ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇಂದು ಆಡಿದ ತಂಡದಲ್ಲಿ ಪರಿಣಿತರ್ಯಾರು ಇರಲಿಲ್ಲ. ಕ್ರಿಕೆಟ್ ಆಡದವರೆ ಹೆಚ್ಚು.