ಇಂದು ಬಿಡುಗಡೆಯಾದ ಪುರುಷರ ನೂತನ ಎಟಿಪಿ ಟೆನಿಸ್ ಶ್ರೇಯಾಂಕದಲ್ಲಿ ನಡಾಲ್ 9,465 ಅಂಕಗಳಿಂದ ನಂ.1 ಸ್ಥಾನ ಪಡೆದಿದ್ದಾರೆ.

ಲಂಡನ್(ಸೆ.18): ಇತ್ತೀಚೇಗಷ್ಟೇ 16ನೇ ಗ್ರ್ಯಾಂಡ್ ಸ್ಲಾಂ ಗೆದ್ದ ಸ್ಪೇನ್‌'ನ ರಾಫೆಲ್ ನಡಾಲ್ ಮತ್ತು ಗಾರ್ಬೈನ್ ಮುಗುರುಜಾ ಕ್ರಮವಾಗಿ ಪುರುಷರ ಎಟಿಪಿ ಹಾಗೂ ಮಹಿಳೆಯರ ಡಬ್ಲೂಟಿಎ ಟೆನಿಸ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

ಇಂದು ಬಿಡುಗಡೆಯಾದ ಪುರುಷರ ನೂತನ ಎಟಿಪಿ ಟೆನಿಸ್ ಶ್ರೇಯಾಂಕದಲ್ಲಿ ನಡಾಲ್ 9,465 ಅಂಕಗಳಿಂದ ನಂ.1 ಸ್ಥಾನ ಪಡೆದಿದ್ದಾರೆ. ಎರಡನೇ ಸ್ಥಾನದಲ್ಲಿ ಸ್ಪಿಜರ್‌'ಲೆಂಡ್‌'ನ ರೋಜರ್ ಫೆಡರರ್, 3ನೇ ಸ್ಥಾನದಲ್ಲಿ ಬ್ರಿಟನ್‌ನ ಆ್ಯಂಡಿ ಮರ್ರೆ, 4ನೇ ಸ್ಥಾನದಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್, 5ನೇ ಸ್ಥಾನದಲ್ಲಿ ಮರಿನ್ ಸಿಲಿಕ್ ಇದ್ದಾರೆ, ಇನ್ನು ಸರ್ಬಿಯಾದ ಆಟಗಾರ ನೊವಾಕ್ ಜೋಕೊವಿಚ್ 6ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಇನ್ನು ಮಹಿಳೆಯರ ಡಬ್ಲೂಟಿಎ ಶ್ರೇಯಾಂಕದಲ್ಲಿ ಸ್ಪೇನ್‌'ನ ಗರ್ಬೈನ್ ಮುಗುರುಜಾ 6,030 ಅಂಕಗಳೊಂದಿಗೆ ನಂ.1 ಕಾಯ್ದುಕೊಂಡಿದ್ದಾರೆ. ಇನ್ನು ರೋಮೆನಿಯಾದ ಸಿಮೋನಾ ಹಾಲೆಪ್ ಎರಡನೇ ಸ್ಥಾನ ಹಾಗೂ ಉಕ್ರೇನಿನ ಎಲಿನಾ ಸ್ವಿಟೋಲಿನಾ ಮೂರನೇ ಸ್ಥಾನದಲ್ಲಿದ್ದಾರೆ.