ಡೋಪಿಂಗ್: ಭಾರತೀಯ ಕ್ರೀಡಾಪಟುಗೆ 4 ವರ್ಷ ನಿಷೇಧ

NADA Bans Indrajit For 4 Years For Doping
Highlights

  • ರಿಯೋ ಗೇಮ್ಸ್‌ಗೆ ಆಯ್ಕೆಯಾಗಿದ್ದ ಇಂದ್ರಜಿತ್‌ರ ರಕ್ತದ ಮಾದರಿಯಲ್ಲಿ ನಿಷೇಧಿತ ಮದ್ದು
  • ತಾವು ಅಮಾಯಕ ಎಂದು ಸಾಬೀತು ಪಡಿಸುವಲ್ಲಿ ಇಂದ್ರಜಿತ್‌ ವಿಫಲ

 

ನವದೆಹಲಿ: 2016ರ ಒಲಿಂಪಿಕ್ಸ್‌ಗೂ ಮುನ್ನ ಉದ್ದೀಪನ ಮದ್ದು ಸೇವಿಸಿ ಸಿಕ್ಕಿ ಬಿದ್ದಿದ್ದ ಭಾರತದ ಶಾಟ್‌ಪುಟ್‌ ಪಟು ಇಂದ್ರಜಿತ್‌ಗೆ ನಿಷೇಧ ಹೇರಲಾಗಿದೆ.

ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ನಿಯಂತ್ರಣ ಘಟಕ (ನಾಡಾ) ಇಂದ್ರಜೀತ್‌ಗೆ 4 ವರ್ಷಗಳ ಅವಧಿಗೆ ನಿಷೇಧ ಹೇರಿದೆ.

ರಿಯೋ ಗೇಮ್ಸ್‌ಗೆ ಆಯ್ಕೆಯಾಗಿದ್ದ ಇಂದ್ರಜಿತ್‌ರ ರಕ್ತದ ಮಾದರಿಯಲ್ಲಿ ನಿಷೇಧಿತ ಮದ್ದು ಸೇವಿಸಿದ್ದಿದ್ದು ದೃಢಪಟ್ಟಿತ್ತು.

ತಾವು ಅಮಾಯಕ ಎಂದು ಸಾಬೀತು ಪಡಿಸುವಲ್ಲಿ ಇಂದ್ರಜಿತ್‌ ವಿಫಲರಾದ ಕಾರಣ ಅವರನ್ನು ಶಿಕ್ಷೆಗೆ ಗುರಿ ಪಡಿಸಲಾಗಿದೆ.

loader