Asianet Suvarna News Asianet Suvarna News

ಮುಸ್ತಾಫಿಜುರ್ ಬರ್ತಿದ್ದಾರೆ ದಾರಿ ಬಿಡಿ

21 ವರ್ಷದ ಯಾರ್ಕರ್ ಸ್ಪೆಷಲಿಸ್ಟ್ ಐಪಿಎಲ್ 9ನೇ ಅವತರಣಿಕೆಯಲ್ಲಿ ಸನ್'ರೈಸರ್ಸ್ ಹೈದರಾಬಾದ್ ತಂಡದ ಪರ 16 ಪಂದ್ಯಗಳನ್ನು ಆಡಿದ್ದಲ್ಲದೇ ತಂಡ ಚಾಂಪಿಯನ್ ಆಗುವಲ್ಲೂ ಪ್ರಮುಖ ಪಾತ್ರವಹಿಸಿದ್ದರು.

Mustafizur Rahman set to join Sunrisers Hyderabad
  • Facebook
  • Twitter
  • Whatsapp

ಹೈದರಾಬಾದ್(ಏ.11): ಸನ್'ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಬೌಲರ್ ಮುಸ್ತಫಿಜುರ್ ರೆಹಮಾನ್ ಮಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೆಗೆ ತಂಡವನ್ನು ಕೂಡಿಕೊಳ್ಳುವುದಾಗಿ ಸ್ವತಃ ಅವರೇ ಸ್ಪಷ್ಟಪಡಿಸಿದ್ದಾರೆ.

ಇದೇ ಜೂನ್'ನಲ್ಲಿ ಲಂಡನ್'ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಮುಸ್ತಾಫಿಜುರ್'ಗೆ ಐಪಿಎಲ್'ನಲ್ಲಿ ಪಾಲ್ಗೊಳ್ಳಲು ಅನುಮತಿ ನೀಡುವ ಕುರಿತಂತೆ ಮೀನಾಮೇಶ ಎಣಿಸಿತ್ತು.

ಇದೀಗ ಸ್ವತಃ ಮುಸ್ತಾಫಿಜುರ್ ಅವರೇ ಐಪಿಎಲ್'ನಲ್ಲಿ ಭಾಗವಹಿಸುತ್ತಿರುವ ಬಗ್ಗೆ ಸ್ಪಷ್ಟನೆ ನೀಡಿದ್ದು, ಏಪ್ರಿಲ್ 12ರಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ.

21 ವರ್ಷದ ಯಾರ್ಕರ್ ಸ್ಪೆಷಲಿಸ್ಟ್ ಐಪಿಎಲ್ 9ನೇ ಅವತರಣಿಕೆಯಲ್ಲಿ ಸನ್'ರೈಸರ್ಸ್ ಹೈದರಾಬಾದ್ ತಂಡದ ಪರ 16 ಪಂದ್ಯಗಳನ್ನು ಆಡಿದ್ದಲ್ಲದೇ ತಂಡ ಚಾಂಪಿಯನ್ ಆಗುವಲ್ಲೂ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಮುಸ್ತಫಿಜುರ್ ಹೈದರಾಬಾದ್ ತಂಡ ಸೇರ್ಪಡೆಗೊಳ್ಳುತ್ತಿರುವುದು ಅದರ ಬೌಲಿಂಗ್ ಲೈನ್'ಅಪ್ ಮತ್ತಷ್ಟು ಬಲಿಷ್ಟವಾಗುವುದರಲ್ಲಿ ಎರಡು ಮಾತಿಲ್ಲ.

Follow Us:
Download App:
  • android
  • ios