ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಇದೀಗ ಕ್ಯಾಮರಮ್ಯಾನ್ ಆಗಿ ಗಮನಸೆಳೆದಿದ್ದಾರೆ. ಅಷ್ಟಕ್ಕೂ ರೋಹಿತ್ ಕ್ಯಾಮರಮ್ಯಾನ್ ಆಗಿದ್ದು ಯಾಕೆ? ಇಲ್ಲಿದೆ ವಿವರ.

ಮೆಲ್ಬೋರ್ನ್(ನ.22): ಆಸ್ಟ್ರೇಲಿಯಾ ವಿರುದ್ದದ 2ನೇ ಟಿ20 ಪಂದ್ಯಕ್ಕೆ ಸಜ್ಜಾಗುತ್ತಿರುವ ಟೀಂ ಇಂಡಿಯಾ ಇದೀಗ ಮೆಲ್ಬೋರ್ನ್‌ನಲ್ಲಿ ಬೀಡುಬಿಟ್ಟಿದೆ. ಅಭ್ಯಾಸದ ಬಿಡುವಿನ ವೇಳೆ ಟೀಂ ಇಂಡಿಯಾ ಸ್ಪೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಕ್ಯಾಮರಮ್ಯಾನ್ ಆಗಿ ಕಾರ್ಯನಿರ್ವಹಿಸಿದ್ದಾರೆ.

ಫೋಟೋ ಶೂಟ್‌ಗಾಗಿ ಟೀಂ ಇಂಡಿಯಾ ಕ್ರಿಕೆಟಿಗರು ರೆಡಿಯಾಗಿದ್ದರು. ಈ ವೇಳೆ ಕನ್ನಡಿಗ ಮನೀಶ್ ಪಾಂಡೆ ಫೋಟೋ ಶೂಟ್‌ಗೆ ನಿಂತಿದ್ದರು. ಇದನ್ನ ರೋಹಿತ್ ಶರ್ಮಾ ಮೊಬೈಲ್ ಕ್ಯಾಮರದಲ್ಲಿ ಸೆರೆ ಹಿಡಿದರು. ಪ್ರೋಫೆಶನಲ್ ಕ್ಯಾಮರಾಮ್ಯಾನ್ ರೀತಿ ಮನೀಶ್ ಪಾಂಡೆ ವೀಡಿಯೋ ಶೂಟ್ ಮಾಡಿದರು. ರೋಹಿತ್ ಕ್ಯಾಮರಮ್ಯಾನ್ ಆಗಿರುವ ವೀಡಿಯೋ ಇದೀಗ ವೈರಲ್ ಆಗಿದೆ.

Scroll to load tweet…

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸೋಲು ಅನುಭವಿಸಿರುವ ಟೀಂ ಇಂಡಿಯಾ ಇದೀಗ 2ನೇ ಪಂದ್ಯದಲ್ಲಿ ತಿರುಗೇಟು ನೀಡೋ ವಿಶ್ವಾಸದಲ್ಲಿದೆ. ನಾಳೆ(ನ.23) ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ 2ನೇ ಚುಟುಕು ಪಂದ್ಯ ಆಯೋಜಿಸಲಾಗಿದೆ.