13 ವರ್ಷಗಳ ಹಿಂದೆ ಮುರಳಿ ವಿಜಯ್ ಉದ್ದ ಕೂದಲು ಕತ್ತರಿಸಿದ್ದೇಕೆ?

Murali Vijay wasn’t allowed to play once for a rather bizarre reason
Highlights

ಕ್ರಿಕೆಟಿಗ ಮುರಳಿ ವಿಜಯ್ ಇತ್ತೀಚೆಗೆ ಲಾಂಗ್ ಹೇರ್ ಬಿಟ್ಟು ಎಲ್ಲರ ಗಮನಸೆಳೆಯುತ್ತಿದ್ದಾರೆ. ಆದರೆ ವಿಜಯ್ 13 ವರ್ಷಗಳ ಹಿಂದೆ ಉದ್ದನೆ ಕೂದಲು ಬಿಟ್ಟಿದ್ದರು. ತಮಗಿಷ್ಟವಾದ ಲಾಂಗ್ ಹೇರ್ ಸ್ಟೈಲ್‌ಗೆ ವಿಜಯ್ ಅನಿವಾರ್ಯವಾಗಿ ಕತ್ತರಿ ಹಾಕಿದ್ದರು. ಹಾಗಾದರೆ ವಿಜಯ್ ಲಾಂಗ್ ಹೇರ್ ಕಟ್ ಮಾಡಿದ್ದೇಕೆ? ಇಲ್ಲಿದೆ ವಿವರ

ಮುಂಬೈ(ಜೂ.18): ಟೀಮ್ಇಂಡಿಯಾ ಟೆಸ್ಟ್ ಕ್ರಿಕೆಟಿಗ ಮುರಳಿ ವಿಜಯ್ ಇತ್ತೀಚೆಗೆ ಹೊಸ ಹೇರ್ ಸ್ಟೈಲ್ ಮಾಡಿ ಮಿಂಚುತ್ತಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ವಿಜಯ್ ಉದ್ದನೆಯ ಹೇರ್ ಸ್ಟೈಲ್ ಎಲ್ಲರ ಗಮನಸೆಳೆದಿತ್ತು. 2008ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಮುರಳಿ ವಿಜಯ್ ಹೆಚ್ಚು ಕಡಿಮೆ ಒಂದೇ ಹೇರ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಮುರಳಿ ವಿಜಯ್ ತಮ್ಮ ಕೂದಲಿನ ವಿನ್ಯಾಸದಲ್ಲಿ ಬದಲಾವಣೆ ತಂದಿದ್ದಾರೆ.

ಮುರಳಿ ವಿಜಯ್ ಉದ್ದ ಕೂದಲು ಬಿಡುತ್ತಿರುವುದು ಇದೇ ಮೊದಲಲ್ಲ. 13 ವರ್ಷಗಳ ಹಿಂದೆ. ಅಂದರೆ 21 ವರ್ಷದ ಯುವಕ ಮುರಳಿ ವಿಜಯ್ ಉದ್ದನೆಯ ಕೂದಲು ಬಿಟ್ಟಿದ್ದರು. ಉದ್ದ ಕೂದಲಿನ ಸ್ಟೈಲ್ ಮುರಳಿ ವಿಜಯ್‌ಗೆ ತುಂಬಾನೆ ಇಷ್ಟ. ಹೀಗಾಗಿ ತನ್ನ ಲಾಂಗ್ ಹೇರ್ ಬಗ್ಗೆ ಸಾಕಷ್ಟು  ಮುತುವರ್ಜಿ ವಹಿಸುತ್ತಿದ್ದರು. 

ಕ್ಲಬ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದ ಮುರಳಿ ವಿಜಯ್‌ರನ್ನ ತಮಿಳುನಾಡು ತಂಡ ಗುರುತಿಸಿತು. ಆದರೆ ಉದ್ದನೆಯ ಕೂದಲಿನಿಂದ ಮುರಳಿ ವಿಜಯ್ ತಂಡಕ್ಕೆ ಆಯ್ಕೆಯಾಗಿರಲಿಲ್ಲ.  ಹೀಗಾಗಿ ಅನಿವಾರ್ಯವಾಗಿ ಕೂದಲು ಕಟ್ ಮಾಡಿದ್ದೆ ಎಂದು ಮುರಳಿ ವಿಜಯ್, ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರ ಭಜ್ಜಿ ಬ್ಲಾಸ್ಟ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

 

 

13 ವರ್ಷಗಳ ಹಿಂದೆ ಲಾಂಗ್ ಹೇರ್ ಕಟ್ ಮಾಡಿ ಶಾರ್ಟ್ ಮಾಡಿಸಿಕೊಂಡಿದ್ದ ವಿಜಯ್ ಬಳಿಕ ಯಾವತ್ತೂ ಕೂದಲ ಉದ್ದ ಬಿಟ್ಟಿಲ್ಲ. ಇದೀಗ ಮತ್ತೆ ಲಾಂಗ್ ಹೇರ್ ಮೂಲಕ ಮಿಂಚುತ್ತಿದ್ದಾರೆ. ಈ ಮೂಲಕ ತಮ್ಮ ಬಾಲ್ಯದ ಹೇರ್ ಸ್ಟೈಲ್ ಮೊರೆಹೋಗಿದ್ದಾರೆ.
 

loader